Saturday, 28 July 2012

ಇಂದು ವಿಶ್ವ ಹ್ಯಾಪಟೈಟಿಸ್‌ ದಿನ

ಮಾನವ ಸಂಕುಲಕ್ಕೆ ಕಾಡುತ್ತಿರುವ ಮಹಾ ರೋಗಗಳಲ್ಲಿ 'ಹ್ಯಾಪಟೈಟಸ್‌ ಬಿ' ಮತ್ತು 'ಹ್ಯಾಪಿಟೈಟಸ್‌ ಸಿ' ಕೂಡ ಪ್ರಮುಖವಾದವುಗಳು. ಜಗತ್ತಿನ ಜನರನ್ನು ಕಾಡಿದ ಈ ಮಾರಕ ರೋಗದ ಕುರಿತು ಜಾಗತಿಕ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸಂಸ್ಥೆ ಹ್ಯಾಪಿಟೈಟಸ್‌ ದಿನವನ್ನು ಘೋಷಿಸಿದೆ. ಅಂತರಾಷ್ಟ್ರೀಯ ಹ್ಯಾಪಿಟೈಟಸ್‌ ದಿನವಾದ ಇಂದು ವಿಶ್ವದಾದ್ಯಂತ ಹ್ಯಾಪಿಟೈಟಸ್‌ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.  

ಜಗತ್ತಿನಲ್ಲಿ ಸರಿಸುಮಾರು 500 ಮಿಲಿಯನ್‌ ಜನ್ರು ಹ್ಯಾಪಿಟೈಟಸ್‌ ಬಿ ಮತ್ತು ಹ್ಯಾಪಿಟೈಟಸ್‌ ಸಿ ರೋಗದಿಂದ ಬಳಲುತ್ತಿದ್ದಾರೆ.. ಇದೇ ರೋಗಗಳ ಕಾರಣದಿಂದ ಒಂದು ಮಿಲಿಯನ್‌ಗೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಇಂತಹ ಮಾರಕ ರೋಗಗಳಿಂದ ಜಗತ್ತನ್ನು ಕಾಪಾಡುವ ದೃಷ್ಠಿಯಿಂದ ವಿಶ್ವಸಂಸ್ಥೆ ಜುಲೈ 28ನ್ನು ವಿಶ್ವ ಹ್ಯಾಪಿಟೈಟಸ್‌ ದಿನವನ್ನಾಗಿ ಘೋಷಿಸಿತು.

2004
ರಲ್ಲಿ ಯೂರೋಪಿಯನ್ ರಾಷ್ಟ್ರಗಳು ಮತ್ತು ಮಧ್ಯ ಪೂರ್ವ ದೇಶಗಳ ಹ್ಯಾಪಿಟೈಟಸ್‌ ಬಾಧಿತರ ಗುಂಫು, ಈ ಮಾರಕ ರೋಗದ ಕುರಿತು ಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಿತು. 2007ರಲ್ಲಿ ವರ್ಲ್ಡ್ ಹ್ಯಾಪಿಟೈಟಸ್‌ ಅಲಿಯನ್ಸ್‌ ಜಗತ್ತಿನಾದ್ಯಂತ ಹ್ಯಾಪಿಟೈಟಸ್‌ ಬಿ ಮತ್ತು ಸಿ ರೋಗದಿಂದ ಬಳಲುತ್ತಿರುವ ರೋಗಿಗಳ ಸರ್ವೆ ಮಾಡಿ, ಜಾಗೃತಿ ಕಾರ್ಯಕ್ರಮ ಕೈಗೊಂಡ್ತು. ನಂತರ ವಿಶ್ವ ಸಂಸ್ಥೆ ಈ ರೋಗವನ್ನು ಗಂಭೀರವಾಗಿ ಪರಿಗಣಿಸಿ, ಜಗತ್ತಿಗೆ ಜಾಗೃತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡ್ತು.. 2008ರ ಜುಲೈ 28ರಂದು ಮೊದಲ ವಿಶ್ವ ಹ್ಯಾಪಿಟೈಟಸ್‌ ದಿನವನ್ನು ಆಚರಿಸಲಾಯ್ತು.

ಯಕೃತ್ತಿನ ಸೋಂಕು ಮತ್ತು ಉರಿಯೂತ ಹ್ಯಾಪಿಟೈಟಸ್‌ ಬಿ ರೋಗದ ಲಕ್ಷಣ.. ಯಕೃತ್ತು ಸಂಬಂಧಿ ರೋಗವಾದ್ದರಿಂದ ತೀವ್ರ ವಾಂತಿ ಬೇಧಿ ಕಾಣಿಸಿಕೊಂಡು ರೋಗಿಯ ಪ್ರಾಣಕ್ಕೇ ಕುತ್ತು ತರುವ ಅಪಾಯಕಾರಿ ವೈರಸ್‌ ಇದು.. ಜಾಗತಿಕ ಅಪಾಯ ತಂದೊಡ್ಡಿರುವ ಹ್ಯಾಪಿಟೈಟಸ್‌ ಎ,ಬಿ, ಸಿ ಮತ್ತು ಡಿ ಸೋಂಕಿನ ನಿವಾರಣೆಗಾಗಿ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಜಾಗೃತಿ ಮೂಡಿಸುತ್ತಿದೆ.. ಸದಸ್ಯರಾಷ್ಟ್ರಗಳಿಗೆ ಈ ರೋಗದ ಅಪಾಯದ ಕುರಿತು, ಮುಂಜಾಗೃತೆ ಮತ್ತು ನಿವಾರಣೆಯ ಕುರಿತು ಮಾಹಿತಿ ಬಿತ್ತುವ ಕೆಲಸ ಮಾಡುತ್ತಿದೆ.  ಹ್ಯಾಪಿಟೈಟಸ್‌ ಸೋಂಕು ಮುಕ್ತ ಜಗತ್ತಿನ ನಿರ್ಮಾಣಕ್ಕಾಗಿ ವಿಶ್ವ ಸಂಸ್ಥೆ ಪಣ ತೊಟ್ಟಿದೆ...

Friday, 27 July 2012

ವರವ ಕರುಣಿಸು ತಾಯಿ... ವರ ಮಹಾಲಕ್ಷ್ಮಿ


ಶುಭ ಶ್ರಾವಣ ಮಾಸದ ಎರಡನೇ ಶುಕ್ರವಾರವಾದ ಇಂದು ವರ ಮಹಾಲಕ್ಷ್ಮಿ ಹಬ್ಬ..ದಕ್ಷಿಣ ಭಾರತದ ಪ್ರಮುಖವಾದ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬವೂ ಒಂದು. ಸಕಲ ಐಶ್ವರ್ಯವನ್ನೂ ಕರುಣಿಸುವ ಮಹಾಲಕ್ಷ್ಮಿಗೆ ಮನೆಮನೆಯಲ್ಲಿ ಸಂಭ್ರಮದ ಪೂಜೆ ನಡೆಯುತ್ತೆ. ಎಲ್ಲೆಲ್ಲೂ ಸುಖ, ಸಂಪತ್ತು, ಸಮೃದ್ಧಿಯನ್ನು ಕರುಣಿಸೋ ಭಾಗ್ಯದಾತೆಯ ಆರಾಧನೆ ನಡೆಯುತ್ತೆ.. ಶ್ರೀ ಮಹಾವಿಷ್ಣುವಿನ ಪತ್ನಿ ವರ ಮಹಾಲಕ್ಷ್ಮಿಯನ್ನು ಪೂಜಿಸಿದ್ರೆ, ಸಕಲ ಸೌಭಾಗ್ಯವೂ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. 

ತಳಿರು ತೋರಣಗಳಿಂದ ಶೃಂಗಾರಗೊಂಡ ಮನೆಗಳಲ್ಲಿ ಭಕ್ತಿಭಾವದಿಂದ ಮಹಾಲಕ್ಷ್ಮಿಯನ್ನು ಸ್ವಾಗತಿಸಲಾಗುತ್ತಿದೆ.  ಸುಂದರ ಮಂಟಪ ಸಿದ್ಧಪಡಿಸಿ, ಲಕ್ಷ್ಮಿ ಮೂರ್ತಿಯನ್ನು ಕುಳ್ಳರಿಸಿ, ಒಪ್ಪಾದ ಸೀರೆಯುಡಿಸಿ, ಹೂವು ಆಭರಣಗಳಿಂದ ದೇವಿಯನ್ನು ಶೃಂಗರಿಸಿ.. ಮಹಾಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಲಾಗುತ್ತೆ. ಸುಮಂಗಲಿಯರಿಗೆ ಅರಶಿನ ಕುಂಕುಮ ನೀಡಿ ಮಹಾಲಕ್ಷ್ಮಿಯನ್ನು ಆರಾಧಿಸಲಾಗುತ್ತೆ.. ವಿವಿಧ ಸಿಹಿ ತಿಂಡಿಗಳನ್ನು ತಯಾರಿಸಿ ವರ ಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮಿಸಲಾಗುತ್ತೆ... ಭಕ್ತಿ ಭಾವದ ವರಲಕ್ಷ್ಮಿ ಹಬ್ಬ ಮನೆ ಮನಗಳಲ್ಲಿ ಹರ್ಷ ತುಂಬುತ್ತದೆ..

ದೀರ್ಘ ಮಾಂಗಲ್ಯ ಭಾಗ್ಯವನ್ನು ಮತ್ತು ಕುಟುಂಬಕ್ಕಾಗಿ ಸುಖ, ಸಮೃದ್ಧಿ, ಸಂಪತ್ತನ್ನು, ಕೋರುವ ಸುಮಂಗಲೆಯರು, ಪುರೋಹಿತರ ಅಗತ್ಯವಿಲ್ಲದೆ ಮಾಡಬಹುದಾದ ವ್ರತವಿದು.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತಿನ ಅಧಿಪತಿಯಾದ ಶುಕ್ರ ಗ್ರಹದ ವಾರದಲ್ಲಿಯೇ ಈ ವ್ರತಾಚರಣೆ ನಡೆಯುವುದರಿಂದ ಈ ವೃತ ಅತ್ಯಂತ ಶ್ರೇಷ್ಠವಂತೆ.

ಸಾಮಾನ್ಯವಾಗಿ ನಗರ ಜನತೆ ಮಾತ್ರ ಆಚರಿಸಿ ಸಂಭ್ರಮಿಸುವ ಹಬ್ಬ ವರಮಹಾಲಕ್ಷ್ಮಿ ಹಬ್ಬ.
ಈ ಹಬ್ಬಕ್ಕೆ ಜಾತಿ ಬೇಧವಿಲ್ಲ.. ಸಮೃದ್ಧಿ, ಸೌಖ್ಯವನ್ನು ಬಯಸಿ ಎಲ್ಲರೂ ಈ ವೃತವನ್ನು ಮಾಡಬಹುದು..  ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಚರಿಸಿಲ್ಪಡುವ ಪ್ರಮುಖ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬವೂ ಒಂದು..ಈ ವೃತ  ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕ ಆಚರಣೆಯಾಗಿ ಬದಲಾಗುತ್ತಿರುವುದೂ ಕೂಡ ಒಂದು ಒಳ್ಳೆಯ ಬೆಳವಣಿಗೆ ಅನ್ನೋದು ಹಲವರ ಅಭಿಪ್ರಾಯ. 


ಭಾಗ್ಯದಾತೆ ವರಮಹಾಲಕ್ಷ್ಮಿಯ ಕೃಪೆಯಿಂದ ಎಲ್ಲೆಡೆಯೂ ಸಂಪತ್ತು ನೆಲೆಸಲಿ ಅನ್ನೋದು ಎಲ್ಲರ ಹಾರೈಕೆ.. ಎಲ್ಲರಿಗೂ ವರ ಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

Sunday, 13 March 2011

ಮನದ ಪರದೆಯ ಮೇಲೆ ಸೃಷ್ಠಿ ಸೊಬಗು

ಕನಸ ವರ್ಷದ ಧಾರೆ
ಚಿಗುರು ಆಸೆಗೆ ಸ್ಪೂರ್ತಿ
ಹಸಿರ ಚಿಗುರಿನ ತುಂಬ
ಹನಿಯ ಸಾಲು
                             ಮನದಿ ತಂಪಿನ ಮಂಜು
                             ಕವಿದ ಸೃಷ್ಠಿಯ ಚೆಲುವು
                             ಚೆಲುವ ಮನಸಿನ ತುಂಬ
                             ಹೂವ ತೇರು
ಸೂರ್ಯ ರಶ್ಮಿಯ ನಗುವು
ದುಗುಡ ಮೋಡವ ಸರಿಸಿ
ಬಂದ ಕಿರಣಗಳ ತುಂಬ
ಖುಷಿಯ ಹೊಳಪು
                             ಭಾವ ತುಂಬಿದ ಮನಸು
                             ಹೂವ ತುಂಬಿದ ಬನವು
                             ಮನದ ಪರದೆಯ ಮೇಲೆ
                             ಸೃಷ್ಠಿ ಸೊಬಗು


Saturday, 26 February 2011

ಬಾ ಗೆಳತಿ ಮತ್ತೆ ಹೋಗೋಣ ಬಾಲ್ಯಕ್ಕೆ

ಎಷ್ಟು ಸುಂದರ ಜೀವನ ಅದು? ಯಾವ ಒತ್ತಡ,ಬೇಸರ,ನಿರಾಸೆ,ದುಖಃಗಳಿಲ್ಲದ ತಿಳಿ ಮನಸ್ಸಿನ ವಯಸ್ಸು ಅದು. ಆಟ ಆಡುತ್ತಾ, ಅಕ್ಕೋರು ಹೇಳಿಕೊಟ್ಟ ಹಾಡು ಹಾಡುತ್ತಾ ಕಳೆದ ನಮ್ಮ ಮತ್ತೀಹಳ್ಳಿ ಶಾಲೆಯ ದಿನಗಳು. ಹೌದು..ಸೀಮಾ, ನಮ್ಮ ಬಾಲ್ಯ ನೆನಪಾಗುತ್ತಿದೆ ನನಗೆ. ಎಷ್ಟು ಚನ್ನಾಗಿತ್ತು ಅಲ್ವಾ?ಅಂದಿನ ವಯಸ್ಸು?

 ನಮ್ಮ ಪರಿಚಯ ಯಾವಾಗ ಆಯ್ತು ಅಂತ ನೆನಪಿದೆಯಾ? ಇಲ್ಲ ಕಣೇ.....ಸರಿಯಾಗಿ ನೆನಪಿಲ್ಲ. ಸುಮಾರು ನಾವು ಐದು ವರ್ಷದವರಿರುವಾಗಲೇ ಪರಿಚಯವಾಗಿರಬೇಕು. ಅಲ್ವಾ? ನಾವು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಟ್ಟಿಗೇ ಓದಿದವರು...ಆ ಹತ್ತುವರ್ಷದಲ್ಲಿ ನಾವೆಷ್ಟು ಬಾರಿ ಜಗಳವಾಡಿರಬೇಕು? ಲೆಕ್ಕವೇ ಇಲ್ಲ. ಜಗಳವಾಡಿದ ಘಂಟೆಯೊಳಗೆ ನಾನು ನೀನು ಮೊದಲಿನಂತೆಯೇ ಆಗ್ಬಿಡುತಿದ್ವಿ. ನೆನೆಸಿಕೊಂಡಾಗಲೆಲ್ಲ ನಗು ಬರುತ್ತೆ. ನಮ್ಮ ಸಹಪಾಠಿಗಳು ಆತ್ರೇಯ,ಮಾರುತಿ,ಸಹನಾ    ನೆನಪಿಗೆ ಬರ್ತಾರೆ. ಮಾರುತಿ ಹೇಳಿಕೊಟ್ಟ ಚುಕ್ಕಿ ರಂಗೋಲೆ ಇನ್ನೂ ನೆನಪಿದೆ ನನಗೆ.  ಮಾರುತಿ ತರುವ ಹುಳಿ ಹಲಗೆ ಹಣ್ಣನ್ನು ಕದ್ದು ಮುಚ್ಚಿ ತಿಂದಿದ್ದು, ನಾವೆಲ್ಲ ಸೇರಿ ಬೆಳೆಸಿದ ಮಲ್ಲಿಗೆ ಗಿಡಗಳು. ತೆಂಗಿನ ಗಿಡಗಳು, ವಿಶ-ಅಮೃತ ಆಟ,ಕಷ್ಟಪಟ್ಟು ಬಾಯಿಪಾಠ ಮಾಡಿದ ಉಲ್ಟಾ ಮಗ್ಗಿ, ಎಲ್ಲಾ ಒಂದೊಂದಾಗಿ ನಿನಪಾಗುತ್ತೆ.

ಸೀಮಾ.... ನೆನಪಿದೆಯಾ ನಿನಗೆ,ನಾಲ್ಕನೇ ತರಗತಿ ಮುಗಿಸಿ ಐದನೇ ತರಗತಿಗೆ ದೂರದ ನಾಣಿಕಟ್ಟಾ ಶಾಲೆಗೆ ಹೋಗಲು ನಾವು ಎಷ್ಟು ಹೆದರಿದ್ವಿ ಅಲ್ವಾ?
ನಾಣಿಕಟ್ಟಾ ಶಾಲೆಯಲ್ಲಿ ಹೊಡೆಯುತ್ತಾರಂತೆ,ಐದನೇ ತರಗತಿಯಿಂದ ಕಷ್ಟದ ಪಾಠಗಳಿವೆಯಂತೆ, ಮೊದಲಿದ್ದ ನಾಲ್ಕು ವಿಷಯಗಳ ಜೊತೆ ಇಂಗ್ಲೀಷ್,ಹಿಂದೀ ಬೇರೇ....
ಅಲ್ಲಿರುವ ನಿರ್ಮಲಾ ಅಕ್ಕೋರು ಬಯ್ಯುತ್ತಾರಂತೆ, ಹಾಗಂತೆ ಹೀಗಂತೆ.... ಮೊದಲು ಹೋಗಿ ಆ ಶಾಲೆ ಸೇರಿದ್ದ ನಮ್ಮ ಮೇಲಿನ ತರಗತಿಯ ಕಾವ್ಯ,ಸುಜೀತ,ಸುನೀಲ,ಅಶೋಕ
ಪ್ರಭಾತ, ಲತಾ, ಮಾಲಿನಿ ಇವರೆಲ್ಲರ ಅನುಭವ ಕೇಳಿ ಹೆದರುತ್ತಾ ಆ ಶಾಲೆಯ ಮೆಟ್ಟಿಲು ಹತ್ತಿದ್ದು...ಅಭ್ಭಾ....! ಎಂಥ ಸಂದರ್ಭ ಅದು. ಆ ವಯಸ್ಸಿಗೆ,ಅದೇ ದೊಡ್ಡದು.

ಆ ಶಾಲೆ ಸೇರಿದ ಮೇಲೆ ಅಲ್ಲಿ ಸಿಕ್ಕವರು ರಮ್ಯಾ,ಅಭಯ. ಸೀಮಾ....ರಮ್ಯಾ ಸಿಕ್ಕಮೇಲೆ ನನಗಿಂತ ಅವಳೇ ಜಾಸ್ತಿ ಇಷ್ಟವಾಗಿಬಿಟ್ಟಿದ್ದಳು ನಿನಗೆ ಅಲ್ವಾ ? ಅದರ ಬಗ್ಗೆ ತುಂಬಾ ನೋವಾಗಿತ್ತು ನಂಗೆ ಗೊತ್ತಾ? ಅದರ ಬಗ್ಗೆ ಜಗಳ ಕೂಡಾ ಆಡಿದ್ದೆ ನಾನು. ನೆನಪಿದೆಯಾ ನಿಂಗೆ? ಆಮೇಲೆ ಹಂಗಲ್ಲ ಕಣೇ....ಅಂತ ಸಮಾಧಾನ ಮಾಡಿದ್ಯಲ್ಲ
ನೀನು? ಚಾಲಾಕಿ ಕಣೇ ನೀನು....ಇಬ್ಬರ ಜೊತೆನೂ ಡಬ್ಬಲ್ಗೆ ಮಾಡ್ತಿದ್ದೆ ಅಲ್ವಾ? ಅಲ್ಲಿಯ ಮೂರು ವರ್ಷ ಹೇಗೆ ಕಳೆಯಿತೋ ಏನೋ...?ಏಳನೇ ತರಗತಿಯಲ್ಲಿ ಬೀಳ್ಕೊಡುಗೆ ಸಮಾರಂಭ ಮಾಡಿಸಿಕೊಂಡು ಅಳುತ್ತಾ ಕೂತಿದ್ದು, ಆಮೇಲೆ ನನ್ನ ಮುಖ ನೀನು ನಿನ್ನ ಮುಖ ನಾನು ನೋಡಿ ಹಹ್ಹಹ್ಹಾ ಎಂದಿದ್ದು.....

ಆಮೇಲೆ ಪ್ರೌಢಶಾಲೆ. ಹೊಸ ಕುತೂಹಲ,ಕನಸು,ಹಲವು ಪ್ರಶ್ನೆಗಳು ಹುಟ್ಟುವ ವಯಸ್ಸು ಅದು. ಸೀಮಾ...... ಆಗ ನಾವು ಎಷ್ಟೊಂದು ಮಾತಾಡ್ತಿದ್ವಿ ಅಲ್ವಾ? ಮಾತು ಮಾತು ಬರೀ ಮಾತು. ಏನೇನೋ ಮಾತಾಡಿಕೊಂಡು ಬಿದ್ದು ಬಿದ್ದು ನಕ್ಕಿದ್ದು,ನೆನಪಾಗುತ್ತೆ ಕಣೇ.. ಹತ್ತನೇ ತರಗತಿಯ ಪರಿಕ್ಷೆ ಸಮೀಪಿಸುತ್ತಿರುವ ವೇಳೆ ಓದುವಾಗ ಕೂಡ ನಾವು ನಗುವುದನ್ನು ಬಿಟ್ಟಿರಲಿಲ್ಲ. ಯಾಕಷ್ಟು ನಗುತ್ತಿದ್ದೆವು ನಾವು? ಅಂಥ ನಗು ಈಗ ಸಾಧ್ಯವೇ ಇಲ್ಲ ಕಣೇ.......

ನಂತರದ ದಿನಗಳಲ್ಲಿ ನಾವು ಆರಿಸಿಕೊಂಡ ವಿಷಯಗಳು, ನಮ್ಮ ಕಾಲೇಜುಗಳು ಬೇರೆ ಬೇರೆಯದಾಗಿ ಹೋಯ್ತು. ಆದರೂ ನಮ್ಮ ಒಡನಾಟ ಹಾಗೇ ಇತ್ತು. ಈಗಲೂ ಹಾಗೇ ಇದೆ.ಅಲ್ವಾ?...ಸೀಮಾ....ನೀನು ನನ್ನ ಬಾಲ್ಯದ ಗೆಳತಿ. ನಿನ್ನ ನಂತರ ಎಷ್ಟೊಂದು ಜನ ಗೆಳೆಯ ಗೆಳತಿಯರು ಸಿಕ್ಕರು ನಂಗೆ.....ಆದರೆ ನಿನ್ನ ಸ್ನೇಹಕ್ಕೆ ನಿನ್ನ ಸ್ನೇಹವೇ ಸಾಟಿ ಕಣೇ.... ಸೀಮಾ... ನಾವೆಲ್ಲ ಬೆಳೆಯುತ್ತಾ ಬೆಳೆಯುತ್ತಾ ನಮ್ಮದೇ ಲೋಕದಲ್ಲಿ ಕಳೆದು ಹೋಗುತ್ತಿದ್ದೇವೆ ಅನ್ನಿಸುತ್ತಿದೆ. ನಮ್ಮ ಸಹಪಾಠಿಗಳೆಲ್ಲ ಚಲ್ಲಾಪಿಲ್ಲಿಯಾಗಿ ಹೋಗಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಮೊದಲಿದ್ದ ಜೀವಂತಿಕೆಯ ಉತ್ಸಾಹ, ಮುಗ್ಧ ನಗು, ಈಗ ನಮ್ಮಲ್ಲಿ ಕಾಣಿಸುವುದೇ ಇಲ್ಲ ಅಲ್ವಾ? ಯಾಂತ್ರಿಕ ಬದುಕಿನಲ್ಲಿ ಯಂತ್ರಗಳೇ ಆಗಿಹೋಗಿದ್ದೇವೆ ಕಣೇ...
ಮೊದಲಿನಂತಹ ಮಾತಿಗೆ, ನಗುವಿಗೆ,ಹರಟೆಗೆ ಸಮಯವೇ ಇಲ್ಲ ನಮಗೆ. ಬದುಕೆಂಬ ಪ್ರವಾಹದಲ್ಲಿ ಮುಳುಗಿ ಕಳೆದು ಹೋಗುತ್ತಿದ್ದೇವೆ.  ನಮ್ಮ ಬಾಲ್ಯದ ಗೆಳಯ ಗೆಳತಿಯರನ್ನು ಅಂತರ್ಜಾಲ ಸಹಾಯದಿಂದ ಹುಡುಕಿ ಮಾತನಾಡಿಸುವ ಕಾಲ ಇದು. ಈಗ ಎಲ್ಲವೂ ನೆನಪು ಮಾತ್ರ ಕಣೇ....ನಾವೇ ನೀರು ಹಾಕಿ ಬೆಳೆಸಿದ ಮತ್ತೀಹಳ್ಳಿ ಶಾಲೆಯ ಮಲ್ಲಿಗೆ ಗಿಡ ಈಗಿಲ್ಲ. ತೆಂಗಿನ ಗಿಡ ಮರವಾಗಿದೆ. ಆ ಶಾಲೆಯಲ್ಲಿ ನಮ್ಮ ಅಕ್ಕೋರು ಇಲ್ಲ. ಬೇರೆ ಯಾರೋ ಟೀಚರ್ ಬಂದಿದ್ದಾರಂತೆ.
ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತವೆ. ನಾವೂ ಅಷ್ಟೇ....ಕಳೆದ ಆ ಮಧುರ ಜೀವನಕ್ಕೆ ಮತ್ತೆ ಹಿಂದಿರುಗಿ ಹೋಗಲು ಸಾಧ್ಯವಿಲ್ಲ, ಹಿಂತಿರುಗಿ ನೋಡಬಹುದು ಅಷ್ಟೇ.....ಸುಂದರ ಬಾಲ್ಯದ ಸುಂದರ ನೆನಪುಗಳನ್ನು ಮೆಲಕು ಹಾಕುವಾಗ ತುಂಬಾ ನೆನಪಾದೆ ಕಣೇ..ನೀನು.,,,, ಬಾ ಗೆಳತಿ ಮತ್ತೆ ಬಾಲ್ಯಕ್ಕೆ...........     
 

 


“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...