Thursday, 4 October 2012

'ಸ್ಪುಟ್ನಿಕ್‌ 1' ಗಗನಕ್ಕೆ ಉಡಾವಣೆಯಾದ ದಿನ, ಬಾಹ್ಯಾಕಾಶ ಯುಗ ಆರಂಭವಾದ ದಿನ


ವಿಶ್ವದ ಮೊದಲ ಉಪಗ್ರಹ, ಸ್ಪುಟ್ನಿಕ್‌ ಗಗನಕ್ಕೆ ಉಡಾವಣೆಯಾದ ದಿನ ಇವತ್ತು. ಸೋವಿಯತ್‌ ಒಕ್ಕೂಟ ಗಗನಕ್ಕೆ ಹಾರಿಬಿಟ್ಟ ಈ ಉಪಗ್ರಹ, ಬಾಹ್ಯಾಕಾಶ ವಿಜ್ಞಾನದ ಮೈಲಿಗಲ್ಲು. ಸ್ಪುಟ್ನಿಕ್‌ ಸ್ಯಾಟಲೈಟ್‌ ಬಾಹ್ಯಾಕಾಶವನ್ನು ಚುಂಬಿಸಿ, ಇವತ್ತಿಗೆ 55 ವರ್ಷ. 
ಆಗತಾನೇ ಎರಡನೇ ವಿಶ್ವ ಯುದ್ಧ ಮುಗಿದ ಕಾಲಘಟ್ಟದಲ್ಲಿ.. ರಷ್ಯಾ ರಾಷ್ಟ್ರ ಸ್ಪುಟ್ನಿಕ್‌ ಉಪಗ್ರಹ ಸೃಷ್ಟಿಮಾಡ್ತು. ಆ ಸಮಯದಲ್ಲಿ ಅಮೆರಿಕಾ ಮತ್ತು ರಷ್ಯಾ ನಡುವೆ ನಡೆಯುತ್ತಿದ್ದ ಶೀತಲ ಸಮರದ ಫಲವಾಗಿ, ಆ ಎರಡು ದೇಶಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಮಿಲಿಟರಿ,ರಕ್ಷಣಾ ವ್ಯವಸ್ಥೆ, ತಂತ್ರಜ್ಞಾನ, ವಿಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಹುಟ್ಟಿಕೊಂಡಿತ್ತು. ಇದೇ ಸಂದರ್ಭದಲ್ಲಿ ವಿಜ್ಞಾನದಲ್ಲಿ ತಮ್ಮ ಸಾಧನೆಯನ್ನು ಬಿಂಬಿಸುವ ಹಟಕ್ಕೆ ಬಿದ್ದ ಸೋವಿಯತ್‌ ಒಕ್ಕೂಟ, ಅಕ್ಟೋಬರ್‌ 4, 1957ರಲ್ಲಿ ಸ್ಪುಟ್ನಿಕ್‌ 1 ಉಪಗ್ರಹವನ್ನು ವ್ಯೋಮಕ್ಕೆ ಉಡಾಯಿಸಿತು.

ಸೋವಿಯತ್ ಒಕ್ಕೂಟವು ಮೊತ್ತ ಮೊದಲ ಮಾನವ ನಿರ್ಮಿತ ಉಪಗ್ರಹ `ಸ್ಪುಟ್ನಿಕ್ 1'ನ್ನು ಕಕ್ಷೆಗೆ ಹಾರಿಸುವುದರೊಂದಿಗೆ, ಜಗತ್ತಿನಲ್ಲಿ ಬಾಹ್ಯಾಕಾಶ ಯುಗ ಆರಂಭವಾಯ್ತು. ಸ್ಪುಟ್ನಿಕ್ ಸ್ಯಾಟಲೈಟ್‌, ‌ 22 ಇಂಚಿನಷ್ಟು ಅಗಲವನ್ನು ಹಾಗೂ 184 ಪೌಂಡ್ ತೂಕವನ್ನು ಹೊಂದಿತ್ತು. ಪ್ರತಿ 96 ನಿಮಿಷಗಳಿಗೆ ಭೂಮಿಗೆ ಒಂದು ಸುತ್ತು ಹಾಕುತ್ತಿದ್ದ ಸ್ಪುಟ್ನಿಕ್‌‌ 18 ಸಾವಿರ ಮೈಲಿ ಕಿಲೋಮೀಟರ್‌ ವೇಗವನ್ನು ಹೊಂದಿತ್ತು. ಮೂರು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಂಚರಿಸಿದ ಸ್ಪುಟ್ನಿಕ್‌ 1, 1958ರ ಪ್ರಾರಂಭದಲ್ಲಿ ಭೂಮಿಯ ವಾತಾವರಣ ಪ್ರವೇಶಿಸಿ ಉರಿದುಬಿತ್ತು.

1957ರ ವರ್ಷದಲ್ಲಿಯೇ ಉಡಾವಣೆಯಾಗಿದ್ದ ಸ್ಪುಟ್ನಿಕ್‌ 2 ಉಪಗ್ರಹದಲ್ಲಿ, ಲೈಕಾ ಎಂಬ ನಾಯಿಯನ್ನು ಕಳಿಸಲಾಗಿತ್ತು.. ನಂತರದ ವರ್ಷದಲ್ಲಿ ಅಮೆರಿಕಾ ದೇಶ ತನ್ನ ಮೊದಲ ಉಪಗ್ರಹ 'ಎಕ್ಸ್‌ಪ್ಲೋರರ್-1' ನ್ನು ಬಾಹ್ಯಾಕಾಶಕ್ಕೆ ಉಡಾಯಿಸಿ ವಿಜ್ಞಾನ ಸಾಧನೆಯನ್ನು ಅನಾವರಣಗೊಳಿಸ್ತು. ನಂತರ, ಶುರುವಾಗಿದ್ದೇ ಸ್ಪೇಸ್‌ ರೇಸ್‌. ಕೆನಡಾ,ಇಟಲಿ, ಆಷ್ಟ್ರೇಲಿಯಾ, ಫ್ರಾನ್ಸ್‌, ಜಪಾನ್‌ ಈ ಮುಂತಾದ ಜಗತ್ತಿನ ಇತರ ರಾಷ್ಟ್ರಗಳೂ ಉಪಗ್ರಹ ಉಡಾವಣೆ ಮಾಡಿದ್ವು.. ಭಾರತವೂ ಕೂಡ 1975ರಲ್ಲಿ, ಮೊದಲ ಕೃತಕ ಉಪಗ್ರಹ 'ಆರ್ಯಭಟ'ವನ್ನು ಉಡಾವಣೆ ಮಾಡ್ತು..

55 ವರ್ಷಗಳ ಹಿಂದೆ ಉಡಾವಣೆಯಾದ, ಸ್ಪುಟ್ನಿಕ್‌ ಜಗತ್ತಿನಲ್ಲಿ ಸ್ಪೇಸ್‌ ರೇಸನ್ನೇ ಹುಟ್ಟುಹಾಕಿತ್ತು. ಅಂದಿನಿಂದ ಇಂದಿನ ತನಕ ಜಗತ್ತಿನ ವಿವಿಧ ರಾಷ್ಟ್ರಗಳಿಂದ ಉಡಾವಣೆಯಾದ ಸ್ಯಾಟಲೈಟ್‌‌ಗಳ ಸಂಖ್ಯೆ ಆರು ಸಾವಿರಕ್ಕೂ ಹೆಚ್ಚು. ವ್ಯೋಮದ ಕುರಿತಾದ ಮಾನವನ ಕುತೂಹಲ ಮುಂದುವರಿಯುತ್ತಲೇ ಇದೆ. ಮಾನವ ನಿರ್ಮಿತ ಉಪಗ್ರಹವೊಂದು ಭೂಮಿಯಿಂದ ವ್ಯೋಮಕ್ಕೆ ಜಿಗಿದ ಈ ದಿನ 'ಬಾಹ್ಯಾಕಾಶ ವಿಜ್ಞಾನದ ಸುವರ್ಣ ದಿನ' ಅಂದ್ರೆ ತಪ್ಪಾಗಲಾರದು.

Tuesday, 2 October 2012

ವಿಶ್ವ ಅಹಿಂಸಾ ದಿನ


ಬಾಪೂಜಿ ಹುಟ್ಟಿದ ಈ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ‘ಮಹಾತ್ಮಾ ಗಾಂಧೀಜಿ’ ಎಂಬ ಹೆಸರು ಭಾರತೀಯರಿಗೆ ಮಾತ್ರ ಪ್ರೇರಕ ಶಕ್ತಿ ಅಲ್ಲ...ಬದಲಾಗಿ ಇಡೀ ಜಗತ್ತಿಗೇ ಇದೊಂದು ಅಹಿಂಸಾ ತತ್ವ. ಅಹಿಂಸೆಯ ಮಂತ್ರ ಬೋಧಿಸಿದ ಮಹಾನ್‌ ವ್ಯಕ್ತಿತ್ವ.  'ಮಹಾತ್ಮಾ ಗಾಂಧಿ' ಅನ್ನೋ ಮಹಾನ್‌ ವ್ಯಕ್ತಿತ್ವಕ್ಕೆ ಇಡೀ ಜಗತ್ತೇ ತಲೆಬಾಗುತ್ತೆ. ನಮ್ಮ ಬಾಪೂಜಿಯ ಹೆಸರೀಗ ವಿಶ್ವಕ್ಕೆ 'ಅಹಿಂಸೆಯ ಧ್ಯೋತಕ.  ಇದೇ ಕಾರಣಕ್ಕೆ ವಿಶ್ವಸಂಸ್ಥೆ ಅಕ್ಟೋಬರ್‌ 2 ನ್ನು ವಿಶ್ವ ಅಹಿಂಸಾ ದಿನವನ್ನಾಗಿ ಘೋಷಿಸಿದೆ. 

ವಿಶ್ವ ಸಂಸ್ಥೆಯ ಸಾಮಾನ್ಯ ಸಮಿತಿ, 2007ರಲ್ಲಿ ಗಾಂಧೀ ಜಯಂತಿಯಂದು ವಿಶ್ವ ಅಹಿಂಸಾ ದಿನವನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡಿತು.  ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿಂಸೆ, ಕ್ರೌರ್ಯ, ರಕ್ತಪಾತಗಳನ್ನು ತಡೆಯಲು, ಗಾಂಧೀಜಿಯಂತಹ ಶಾಂತಿ ಧೂತರ ತತ್ವಗಳನ್ನು ಜಗತ್ತಿಗೆ ಜ್ಞಾಪಿಸುವುದು ಅನಿವಾರ್ಯ ಅನ್ನೋದು ವಿಶ್ವ ಸಂಸ್ಥೆಯ ನಿಲುವು.  ವಿಶ್ವದ ಶಾಂತಿಗಾಗಿ ಸದಾ ಪ್ರಯತ್ನಿಸುವ ವಿಶ್ವ ಸಂಸ್ಥೆ, ಅಹಿಂಸಾ ವಾದಿ ಗಾಂಧೀಜಿಯವರ ಹುಟ್ಟಿದ ದಿನವನ್ನೇ ವಿಶ್ವ  ಅಹಿಂಸಾ ದಿನವನ್ನಾಗಿ ಆಚರಿಸಲು ನಿರ್ಧಾರ ಮಾಡ್ತು. 

2007ರಲ್ಲಿಯೇ ಪ್ರಥಮ ಬಾರಿಗೆ ಅಕ್ಟೋಬರ್‌ 2 ರಂದು, ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಯ್ತು.
ಸ್ವಾತಂತ್ರ್ಯ ಆಂದೋಲನದಲ್ಲಿ ನಿರಂತರ ಹೋರಾಟ ನಡೆಸಿ, ಭಾರತದಲ್ಲಿ ಸ್ವಾತಂತ್ರ್ಯ ಸೂರ್ಯ ಉದಯಿಸುವಂತೆ ಮಾಡಿದ ಗಾಂಧೀಜಿಯವರ ಅಹಿಂಸೆಯ ಶಾಂತಿ ಮಂತ್ರವನ್ನು ಜಗತ್ತಿಗೇ ಸಾರುವ ಕೆಲಸ ಮಾಡಲಾಗುತ್ತಿದೆ ವಿಶ್ವ ಸಂಸ್ಥೆ.  ಸತ್ಯ, ನ್ಯಾಯ, ಧರ್ಮ, ನಿಷ್ಠೆಯ ಹಾಗೂ ಸರಳ ಜೀವನದಿಂದ ಗಮನ ಸೆಳೆದ ಈ ಮಹಾತ್ಮ ಹುಟ್ಟಿದ ದಿನವನ್ನು ಜಗತ್ತೇ ಜ್ಞಾಪಿಸಿಕೊಳ್ಳುತ್ತೆ.., ಗೌರವ ಸೂಚಿಸುತ್ತೆ..

Monday, 24 September 2012

ಮೇಡಮ್‌ ಕಾಮಾ ಹುಟ್ಟಿದ ದಿನ ಇವತ್ತು


ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಿಂಚಿದ ಮಹಿಳಾ ಹೋರಾಟಗಾರ್ತಿ. ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿಮೆರೆದ ಮಹಿಳೆ. ಭಾರತೀಯತೆಯನ್ನು ಪ್ರತಿನಿಧಿಸುವ, ರಾಷ್ಟ್ರಧ್ವಜವನ್ನು ಮೊಟ್ಟ ಮೊದಲಬಾರಿಗೆ ಆರೋಹಣ ಮಾಡಿದ ನಾಯಕಿ... ಮೇಡಮ್‌ ಕಾಮಾ ಹುಟ್ಟಿದ ದಿನ ಇವತ್ತು..
1861 ರ ಸೆಪ್ಟೆಂಬರ್‌ 24ರಂದು ಹುಟ್ಟಿದ್ದ ಮೇಡಮ್‌ ಕಾಮಾರ ಹೆಸರು, ಮುಂಚೆ ಭಿಕಾಜಿ ಪಟೇಲ್‌ ಎಂದಾಗಿತ್ತು. ಮುಂಬೈನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದ ಇವರು ಒಳ್ಳೆಯ ಶಿಕ್ಷಣ ಪಡೆದ್ರು.

ಬ್ರಿಟೀಷ್‌ ವಕೀಲರಾದ ರಸ್ಟಾಮ್‌ ಕಾಮಾರನ್ನು ಪ್ರೀತಿಸಿ ಮದುವೆಯಾದ ಭಿಕಾಜಿ ಪಟೇಲ್‌, ಭಿಕಾಜಿ ಕಾಮಾ ಆಗಿ ಬದಲಾದ್ರು. ಆದ್ರೆ, ಸಂತಸದ ದಾಂಪತ್ಯ ಜೀವನ ಇವರದಾಗಿರಲಿಲ್ಲ, ಹೀಗಾಗಿ ಸಾಮಾಜ ಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ್ರು. 1896ರ ಸಮಯದಲ್ಲಿ ಮುಂಬೈ ನಗರದಲ್ಲಿ ಕ್ಷಾಮ ಮತ್ತು ಪ್ಲೇಗ್‌ ರೋಗ ಕಾಣಿಸಿಕೊಂಡಾಗ, ಪ್ಲೇಗ್‌ ಮಾರಿಗೆ ತುತ್ತಾಗಿ ಬಳಲಿದ್ರು. ಅದೃಷ್ಟವಶಾತ್‌ ಚಿಕಿತ್ಸೆಯಿಂದ ಚೇತರಿಸಿಕೊಂಡ್ರು. ನಂತರ ಪ್ಲೇಗ್‌ ರೋಗಿಗಳ ಸೇವೆ ಮಾಡಿದ್ರು.  

1902
ರಲ್ಲಿ ದಾದಾ ಬಾಯಿ ನವರೋಜಿಯವರ ಜೊತೆ, ದೇಶಕ್ಕಾಗಿ ಕೆಲಸ ಮಾಡಿದ್ರು.  1907ರಲ್ಲಿ ಜರ್ಮನಿಯ ಸ್ಟಟ್‌‌ಗರ್ಟಿನಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಸಮಾಜವಾದಿ ಅಧಿವೇಶನದಲ್ಲಿ ಕೆಂಪು, ಬಿಳಿ ಮತ್ತು ಹಸಿರು ಪಟ್ಟಿಗಳಿದ್ದ ತ್ರಿವರ್ಣ ರಂಜಿತ ಭಾರತೀಯ ರಾಷ್ಟ್ರಧ್ವಜದ ಮೊದಲ ಮಾದರಿಯನ್ನು ಹಾರಿಸಿ, ವಿಶೇಷ ಕೀರ್ತಿಗೆ ಪಾತ್ರರಾದ್ರು ಮೇಡಮ್‌ ಕಾಮಾ.

ಈ ಧ್ವಜ ಭಾರತದ ಸ್ವಾತಂತ್ರ್ಯದ ಪ್ರತೀಕ. ಇದು ಭಾರತದ ಸ್ವತ೦ತ್ರಕ್ಕಾಗಿ ಜೀವತ್ಯಜಿಸಿದ ದೇಶಪ್ರೇಮಿಗಳ ನೆತ್ತರಿನಿ೦ದ ಪವಿತ್ರಗೊಳಿಸಲ್ಪಟ್ಟಿದೆ. ಈ ಧ್ವಜದ ಪತಿನಿಧಿಯಾಗಿ ಪ್ರಾರ್ಥಿಸುತ್ತೇನೆ, ಓ ಮಹನೀಯರೇ ಏಳಿ, ಈ ಧ್ವಜಕ್ಕೊ೦ದಿಸಿ. ವಿಶ್ವದೆಲ್ಲ ಸ್ವತ೦ತ್ರ್ಯಾರಾಧಕರೇ ಈ ಧ್ವಜದೊಡನೆ ಸಹಕರಿಸಿ" ಎಂದು ಉದ್ಘರಿಸಿದ ಮೇಡಮ್‌ ಕಾಮಾರಿಗೆ ಅಲ್ಲಿ ನೆರೆದವರೆಲ್ಲ ಎದ್ದುನಿಂತು ತಮ್ಮ ಸ್ಪಂದನೆಯನ್ನು ಸೂಚಿಸಿದ್ರು.

ನಾವು ಭಾರತಕ್ಕಾಗಿದ್ದೇವೆ, ಭಾರತ ಭಾರತೀಯರಿಗಾಗಿಯೇ ಇದೆ. ಎಂದು ಸಾರುತ್ತ, ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸುತ್ತಿದ್ದ ಮೇಡಮ್‌ ಕಾಮಾರ ಕಾರ್ಯವನ್ನು ಹತ್ತಿಕ್ಕಲು ಬ್ರಿಟೀಷ್‌ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಪ್ಯಾರೀಸ್‌ನಲ್ಲಿದ್ದ ಕಾಮಾ ಅವರ ಮನೆ, ವಿದೇಶಗಳಲ್ಲಿರುವ ಭಾರತೀಯ ಕ್ರಾಂತಿಕಾರಿಗಳ ಅಡ್ಡವಾಗಿತ್ತು. ರಷಿಯನ್‌‌ ಕ್ರಾಂತಿಕಾರಿ ಲೆನಿನ್‌ ಕೂಡ, ತಮ್ಮ ತೀರ್ವಗಾಮಿ ವಿಚಾರ ವಿನಿಮಯಕ್ಕಾಗಿ ಇಲ್ಲಿಗೆ ಭೇಟಿ ಕೊಡ್ತಾ ಇದ್ರು. 'ವಂದೇ ಮಾತರಂ' ಎಂಬ ಕ್ರಾಂತಿಕಾರಿ ಪತ್ರಿಕೆಯ ಸಂಪಾದಕಿಯಾಗಿಯೂ  ಮೇಡಮ್‌ ಕಾಮಾ ಕೆಲಸ ಮಾಡಿದ್ರು. ಭಾರತದ ಮತ್ತೋರ್ವ ಕ್ರಾಂತಿಕಾರಿ ನಾಯಕ ವೀರ್‌ ಸಾವರ್ಕರ್‌ಗೆ ಸಂಪೂರ್ಣ ಬೆಂಬಲ ನೀಡಿದ್ರು. ಇವರ ಈ ಕ್ರಾಂತಿಕಾರಿ ಹೋರಾಟದ ಫಲವಾಗಿ, ಬ್ರಿಟೀಷ್‌ ಸರ್ಕಾರ ಮೇಡಮ್‌ ಕಾಮಾರಿಗೆ ಭಾರತಕ್ಕೆ ಮರಳದಂತೆ ತಾಕೀತು ಮಾಡಿತ್ತು.

35
ವರ್ಷಗಳ ಕಾಲ ವಿದೇಶದಿಂದಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಕಾಯಾ ವಾಚಾ ಮನಸಾ ಹೋರಾಡಿದ ಈ ಹೋರಾಟಗಾರ್ತಿ,1936ರ ಆಗಷ್ಟ್‌13ರಲ್ಲಿ ಅನಾರೋಗ್ಯದ ಕಾರಣದಿಂದ ವಿಧಿವಶರಾದ್ರು. ವಿದೇಶದಲ್ಲಿದ್ದುಕೊಂಡು ತಾಯ್ನಾಡಿಗಾಗಿ ಹೋರಾಡಿದ ಇವರು, ಜೀವನದ ಕೊನೆಯ ದಿನಗಳಲ್ಲಿ ಭಾರತಕ್ಕೆ ಮರಳಿ,  ಭಾರತಮಾತೆಯ ಮಡಿಲಿನಲ್ಲಿಯೇ ಪ್ರಾಣಬಿಟ್ಟರು.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...