ಮನದಲ್ಲಡಗಿದ ಸುಪ್ತ ಸ್ಪೂರ್ತಿಯೇ
ಮರಳಿ ನನ್ನೆಡೆಗೆ ಬಾ...................
ಮನದ ಮೂಲೆಯಲಿ ಮಾಸಿಹೋಗುತಿಹ
ಭಾವ ಭಾಷೆಗೆ ಜೀವ ತುಂಬು ಬಾ.......
ಕುರುಡು ಕನಸಿನಲಿ ಕರವ ಚಾಚಿದ
ಕಾರ್ಗತ್ತಲೆಯ ಸರಿಸು ಬಾ...........
ಕುರುಡು ಕನಸಿನಲಿ ಕರವ ಚಾಚಿದ
ಕಾರ್ಗತ್ತಲೆಯ ಸರಿಸು ಬಾ...........
ಕಂಬನಿ ಬತ್ತಿದ ಬಿಗೆ ಬಗೆ ಧಗೆಯಲಿ
ಹರ್ಷ ವರ್ಷವ ಸುರಿಸು ಬಾ...........
ಎದೆಯಾಳದ ನೋವ ಹೀರಿ
ಮನದ ದುಗುಡ ಮರೆಸು ಬಾ....
ಎದೆಯಾಳದ ನೋವ ಹೀರಿ
ಮನದ ದುಗುಡ ಮರೆಸು ಬಾ....
ಚಿಮ್ಮುತಿರುವ ಹರ್ಷ ಸುಧೆಯ
ಮನದ ತುಂಬಾ ಹರಿಸು ಬಾ...........