ಏನಂತ ಹೇಳಲಿ,ಬದುಕೇ
ವಿಚಿತ್ರ.... ನಮ್ಮ ನಿರೀಕ್ಷೆ ನಿಜ
ಆಗೋದು ಬಹಳ ವಿರಳ.
ಕಲ್ಪನೆಯಿಂದ ಕನಸುಗಳು, ಕನಸುಗಳಿಂದ ನಿರೀಕ್ಷೆಗಳು ಜೀವನದಲ್ಲಿ ಸಹಜ.
ಸಹಜವಾಗಿಯೇ ನನ್ನ ಮನಸಲ್ಲಿ ಮೊಳಕೆಯೊಡೆದ ಕನಸು
ನೀನು. ಈಗ ನನ್ನ
ಬಿಟ್ಟು ಎಲ್ಲಿ ಹೋದೆ ?
ಓ ನನ್ನ ಕನಸೇ
ನೀ ಯಾಕೆ ಹೀಗೆ
ಮಾಡಿದೆ ? ಹೊಸ ಆಸೆಗಳನ್ನು, ಆಕಾಂಕ್ಷೆಗಳನ್ನು ಹುಟ್ಟಿಸಿ ಮಾಯವಾದೆ ಯಾಕೆ?
ನಾನು ನಿನ್ನ ಎಷ್ಟೊಂದು ನಂಬಿಬಿಟ್ಟಿದ್ದೆ ಗೊತ್ತಿದೆಯಾ ? ನಿನ್ನ ನಂಬಿ
ನೂರಾರು ಆಸೆಗಳಿಗೆ ಜೀವ ತುಂಬಿದ್ದೆ. ಜೀವನ ಅನ್ನೋದು ಹೂವಿನ ದಾರಿ ಅನ್ನಿಸಿಬಿಟ್ಟಿತ್ತು. ನಿನ್ನಿಂದ ಎಷ್ಟು ಖುಷಿ ಆಗಿತ್ತು ಅಂದ್ರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿತ್ತು. ಕನಸೇ...... ನೀನು ಬರಿಯ ಕನಸು ಅನ್ನೋದು ಈಗ ಅರ್ಥವಾಗಿದೆ. ಅರ್ಥವಾಗಲು ಇಷ್ಟೊಂದು ಸಮಯ ಬೇಕಾಯಿತು ನನಗೆ.
ದೂರ ನಿಂತು ಮಿನುಗುವ ನಕ್ಷತ್ರವಾದೆ ನೀನು. ಹತ್ತಿರದಲ್ಲಿಯೇ ಇರುವಂತೆ ಭಾಸವಾಗಿ ಮಾಯವಾದ ಮರೀಚಿಕೆ. ನಾನು
ನಿನ್ನ ಅಷ್ಟೊಂದು ನಂಬಿದ್ದೇ ನನ್ನ
ನೋವಿಗೆ ಕಾರಣವಾ ? ನೀನು ಕನಸಾಗಿಯೇ ಉಳಿದುಬಿಡುತ್ತಿಯಾ? ನಾನು ನಿನ್ನ
ನನಸ ರೂಪದಲ್ಲಿ ಕಾಣಲು ಸಾಧ್ಯವೇ ಇಲ್ಲವೇ?
ನನ್ನ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವದಕ್ಕೂ ನೀನು ಜೊತೆಗಿಲ್ಲ. ನನ್ನ
ಪ್ರಶ್ನೆಗಳು ಅನಾಥವಾಗಿವೆ ಉತ್ತರಗಳೇ ಇಲ್ಲದೆ...ಅವೂ ಕೂಡ ನನ್ನಂತೆ... ಏನೇ ಇರಲಿ.. ನಮ್ಮ ಕನಸು
ನಿರೀಕ್ಷೆ ನಿಜವಾಗದೆ ಇರಬಹುದು ಆದರೆ
ಜೀವನ ಪ್ರೀತಿಯನ್ನು ಹೆಚ್ಚಿಸಲು ಕನಸುಗಳು ಬೇಕೆ
ಬೇಕು. ಅಲ್ಲವೇ ? ಜೀವನದ ದಾರಿಯಲ್ಲಿ ನೀನೊಂದು ವಿಶೇಷ,
ವಿಸ್ಮಯ. ನನ್ನ ನೆನಪಲ್ಲಿ ಸದಾ
ನಿನಗಾಗಿ ಸ್ಥಳವಿರುತ್ತದೆ. ಮರೆಯ ಬೇಡ ನನ್ನ...
Sunday, 2 December 2012
Tuesday, 16 October 2012
ವಿಶ್ವ ಆಹಾರ ದಿನ
ಇವತ್ತು ಅಂತರಾಷ್ಟ್ರೀಯ ಆಹಾರ ದಿನ. ಕೃಷಿಕರು ಮತ್ತು ಆಹಾರೋತ್ಪಾದಕರ
ಅಭಿವೃದ್ಧಿಗಾಗಿ ವಿಶ್ವ
ಸಂಸ್ಥೆ ಈ ದಿನ ಆಚರಿಸುತ್ತಿದೆ. ವಿಶ್ವ ಸಂಸ್ಥೆಯ
ಅಂಗಸಂಸ್ಥೆಯಾದ 'ವಿಶ್ವ ಆಹಾರ
ಮತ್ತು ಕೃಷಿ ಸಂಸ್ಥೆ' 1945,
ಅಕ್ಟೋಬರ್
16ರಂದು
ಸ್ಥಾಪಿತಗೊಂಡ್ತು. ಇದರ ಸ್ಮರಣಾರ್ಥ ಅಕ್ಟೋಬರ್ 16ನ್ನು ಅಂತರಾಷ್ಟ್ರೀಯ ಆಹಾರ ದಿನವನ್ನಾಗಿ ವಿಶ್ವ ಸಂಸ್ಥೆ
ಘೋಷಿಸಿತು.
1945 ರ ವಿಶ್ವ ಸಂಸ್ಥೆಯ 'ಸಾಮಾನ್ಯ ಸಭೆ'ಯಲ್ಲಿ, ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಸದಸ್ಯರಾಗಿದ್ದ, ಹಂಗೇರಿಯಾದ ಮಂತ್ರಿ ' ಡಾ.ಪಾಲ್ ರೊಮೇನಿ, ವಿಶ್ವ ಆಹಾರ ದಿನ ಆಚರಿಸೋಕೆ ಸಲಹೆ ನೀಡಿದ್ರು. ಇವರ ಸಲಹೆಯನ್ನು ಸ್ವೀಕರಿಸಿ ವಿಶ್ವ ಸಂಸ್ಥೆ, ಈ ದಿನವನ್ನು ಅಂಗೀಕರಿಸಿತು. ಇದೀಗ ಸುಮಾರು 150 ರಾಷ್ಟ್ರಗಳಲ್ಲಿ ವಿಶ್ವ ಆಹಾರ ದಿನ ಆಚರಿಸ್ತಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿರುವ ಬಡತನ ಮತ್ತು ಹಸಿವಿನ ಕುರಿತು ಜಗತ್ತಿಗೆ ಅರಿವು ಮೂಡಿಸಲಾಗುತ್ತೆ. ಜಗತ್ತಿನ ಜನರಿಗೆ ಆಹಾರ ಪೂರೈಸೋ ರೈತರ ಸಮಸ್ಯೆಗಳ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅನೇಕ ಕಾರ್ಯಕ್ರಮಗಳು ಈ ದಿನ ಜರುಗುತ್ವೆ. ಸಣ್ಣ ಪ್ರಮಾಣದ ರೈತರಿಗೆ ಸಹಾಯ ಮಾಡಲು ಮೈಕ್ರೋ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತೆ. ಆಹಾರ ಪೂರೈಕೆ ಮತ್ತು ವಿತರಣೆಯ ಸಮಸ್ಯೆಗಳ ಕುರಿತು, ವಿಶ್ವ ಸಂಸ್ಥೆಯ ಆಶ್ರಯದಲ್ಲಿ, ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ವಿಚಾರಗೋಷ್ಟಿ, ಸಮ್ಮೇಳನಗಳು, ಕಾರ್ಯಾಗಾರಗಳನ್ನು ನಡೆಸಲಾಗುತ್ತೆ.
ಭಾರತದಂತಹ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಯ ಬೆನ್ನೆಲುಬಾಗಿದೆ ಕೃಷಿ. ಹೀಗಾಗಿ ಆರೋಗ್ಯ ಪೂರ್ಣ ಆಹಾರದ ಪೂರೈಕೆ ಮತ್ತು ಉತ್ಪಾದನೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತೆ, ಹಾಗೇ.. ಎಲ್ಲ ದೇಶಗಳೂ, ತಮ್ಮ ಕೃಷಿ ಕ್ಷೇತ್ರದ ಅಭಿವೃದ್ಧಿಗೆ, ಹಾಗೂ ರೈತರ ಒಳಿತಿಗೆ ಪ್ರಯತ್ನಿಸಬೇಕು ಎಂದು ವಿಶ್ವ ಸಂಸ್ಥೆ ಆಶಿಸುತ್ತದೆ.

ವಿಶ್ವ ಗ್ರಾಮೀಣ ಮಹಿಳಾ ದಿನ ( ಅಕ್ಟೋಬರ್ 15 )
ನಾರಿಯೊಂದು ಕಲಿತರೆ
ಶಾಲೆಯೊಂದು ತೆರೆದಂತೆ ಅನ್ನೋ ಮಾತೊಂದಿದೆ. ಇದು ನಿಜ ಕೂಡ. ಹಾಗೇ.. ಗ್ರಾಮೀಣ ಪ್ರದೇಶದ ಮಹಿಳೆಯರೆಲ್ಲ ಕಲಿತರೆ..? ಗ್ರಾಮೀಣ ಪ್ರದೇಶದೆಲ್ಲಡೆ ಶೈಕ್ಷಣಿಕ ಕ್ರಾಂತಿಯೇ ಆಗುತ್ತೆ.. ಗ್ರಾಮೀಣ ಸಮಾಜ ಅಭಿವೃದ್ಧಿಯತ್ತ
ಸಾಗುತ್ತೆ.. ಇದೇ ಸಂದೇಶವನ್ನು ಸಾರುವುದಕ್ಕಾಗಿಯೇ ವಿಶ್ವಸಂಸ್ಥೆ, ಇವತ್ತು 'ವಿಶ್ವ
ಗ್ರಾಮೀಣ ಮಹಿಳಾ ದಿನ' ಆಚರಿಸ್ತಾ ಇದೆ.
ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಹೊಂದಿದ ರಾಷ್ಟ್ರಗಳ
ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವ ಗ್ರಾಮೀಣ
ಮಹಿಳೆಯರಿಗಾಗಿ ಅರ್ಪಿತವಾದ ದಿನ ಇವತ್ತು. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಅಭಿವೃದ್ಧಿಯ ಜಾಗೃತಿಗಾಗಿ ವಿಶ್ವ ಸಂಸ್ಥೆ ಈ ದಿನ ಆಚರಿಸುತ್ತಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಗಳಲ್ಲಿ, ಹೆಣ್ಣುಮಕ್ಕಳ ಅಭಿವೃದ್ಧಿ ಕಡೆಗಣಿಸಲ್ಪಟ್ಟಿರುತ್ತೆ. ಕುಟುಂಬದ ಆರೈಕೆ, ಪೋಷಣೆಗಾಗಿ ಮಾತ್ರ ಮಹಿಳೆ ಮೀಸಲು ಎಂಬ ಧೋರಣೆ ವಿಶ್ವದ ಹಲವು ದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇದೆ. ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಶೀಲ ದೇಶಗಳ ಗ್ರಾಮೀಣ ಮಹಿಳೆಯರು ಬೆಳೆವಣಿಗೆ ಕಂಡಿಲ್ಲ ಅನ್ನೋದು ಇಂದಿನ ವರ್ತಮಾನ. ಇದೇ ಕಾರಣಕ್ಕೆ 2008ಲ್ಲಿ ವಿಶ್ವ ಸಂಸ್ಥೆ, ಗ್ರಾಮೀಣ ಪ್ರದೇಶದ ಮಹಿಳೆಯರ ಅಭಿವೃದ್ಧಿಯ ಜಾಗೃತಿ ಮೂಡಿಸುವುದಕ್ಕಾಗಿ, ವಿಶ್ವ ಗ್ರಾಮೀಣ ಮಹಿಳಾ ದಿನವನ್ನು ಘೋಷಿಸಿತು.
ಕೃಷಿ ಆಧಾರಿತ ಮತ್ತು ಕುಶಲಕರ್ಮಕ್ಕೆ ಸಂಬಂಧಿತ ಉದ್ಯೋಗಗಗಳೇ ಪ್ರಧಾನವಾಗಿರುವ ಗ್ರಾಮೀಣ ಪ್ರದೇಶದಲ್ಲಿ, ಶಿಕ್ಷಣ ಸಹಜವಾಗಿ ಕಡೆಗಣಿಸಲ್ಪಟ್ಟಿರುತ್ತೆ. ಇಂತಹ ಉದ್ಯೋಗಗಳಲ್ಲಿ ತೊಡಗಿಕೊಂಡಿರೋ ಹೆಣ್ಣುಮಕ್ಕಳು ಶಿಕ್ಷಣಕ್ಕೆ ಅತೀ ಮಾನ್ಯತೆ ನೀಡದಿರುವುದು ಹಲವು ದೇಶಗಳಲ್ಲಿ ಕಂಡುಬರ್ತಾ ಇದೆ.
ಲಿಂಗ ಸಮಾನತೆ ಕಾಪಾಡಿಕೊಳ್ಳುವತ್ತ ಹಾಗೂ ಮಹಿಳಾ ಸಶಕ್ತೀಕರಣದತ್ತ ಎಲ್ಲ ದೇಶಗಳೂ ಪ್ರಯತ್ನಿಸಬೇಕು ಎಂದು ವಿಶ್ವಸಂಸ್ಥೆ ಸಾರುತ್ತದೆ. ಆಹಾರ ಭದ್ರತೆ ಮತ್ತು ಪೌಷ್ಟಿಕತೆಯ ಸುಧಾರಣೆ ಮಾಡಿ, ಗ್ರಾಮೀಣ ಪ್ರದೇಶವನ್ನು ಕಾಡುತ್ತಿರುವ ಬಡತನ ನಿವಾರಿಸುವಲ್ಲಿ ಪ್ರತೀ ರಾಷ್ಟ್ರಗಳೂ ಪ್ರಯತ್ನಿಸಬೇಕು. ಗ್ರಾಮೀಣ ಪ್ರದೇಶಗಳನ್ನು ಆರ್ಥಿಕವಾಗಿ ಸಮೃದ್ಧಗೊಳಿಸುವುದರಿಂದ, ಜೀವನಮಟ್ಟ ಸುಧಾರಿಸಲು ಸಾಧ್ಯ. ಬಡತನ ನೀಗಿದ್ರೆ, ಹೆಣ್ಮಕ್ಕಳ ಶಿಕ್ಷಣದತ್ತ ಸಮಾಜ ಮನಸ್ಸು ಮಾಡುತ್ತೆ. ಅನ್ನೋದು ಸಮಾಜ ಶಾಸ್ತ್ರಜ್ಞರ ವಾದ.
ಅಭಿವೃದ್ದಿಹೊಂದಿದ ರಾಷ್ಟ್ರಗಳಂತೆ, ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳ ಮಹಿಳೆಯರೂ ಕೂಡ ಸಬಲೆಯರಾಗಬೇಕು, ಒಂದು ಸು ಸಮಾಜದ ಸೃಷ್ಠಿಗೆ ಪುರುಷ ಮತ್ತು ಮಹಿಳೆಯರ ಸಮಪಾಲು ಇರುವ ಕಾರಣ, ಜಗತ್ತಿನಾದ್ಯಂತ ಮಹಿಳಾ ಸಶಕ್ತೀಕರಣವಾಗಬೇಕು ಅನ್ನೋದು ವಿಶ್ವ ಸಂಸ್ಥೆಯ ಒತ್ತಾಸೆ
Subscribe to:
Posts (Atom)
“ಕ್ಯಾನ್ಸರ್”
ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್ ಒಂದು...
-
ಈಗ ಸರಿಯಾಗಿ ಒಂದು ವರ್ಷದ ಹಿಂದಿನ ಕಥೆ ಇದು. ಕ್ರಿಸ್ತ ಶಕ ಕರೊನಾ ಪೂರ್ವ ಕಾಲ ಅನ್ನಿ. ಆವತ್ತು ನಮ್ಮ ಮೂವರ ಸವಾರಿ ಗಿರಿನಗರದ ಗಣೇಶ್ ಮಾನಸಾ ಮನೆಗೆ ಹೋಗಿತ್ತು. ಮಾತುಗ...
-
ಆವತ್ತು ನಾನು ಅವನಿಗೆ ಸ್ವಲ್ಪ ಗಾಬರಿಯಿಂದ್ಲೇ ಫೋನ್ಮಾಡಿದ್ದೆ. ದನಿಯಲ್ಲಿ ಸ್ವಲ್ಪ ಕಂಪನವಿತ್ತು. ಕಣ್ಣಿನಲ್ಲಿ ನೀರು ಹರಳುಗಟ್ಟಿತ್ತು. ಮನಸ್ಸು ನಿಜಕ್ಕೂ ನೊಂದಿತ...