ಏನಂತ ಹೇಳಲಿ,ಬದುಕೇ
ವಿಚಿತ್ರ.... ನಮ್ಮ ನಿರೀಕ್ಷೆ ನಿಜ
ಆಗೋದು ಬಹಳ ವಿರಳ.
ಕಲ್ಪನೆಯಿಂದ ಕನಸುಗಳು, ಕನಸುಗಳಿಂದ ನಿರೀಕ್ಷೆಗಳು ಜೀವನದಲ್ಲಿ ಸಹಜ.
ಸಹಜವಾಗಿಯೇ ನನ್ನ ಮನಸಲ್ಲಿ ಮೊಳಕೆಯೊಡೆದ ಕನಸು
ನೀನು. ಈಗ ನನ್ನ
ಬಿಟ್ಟು ಎಲ್ಲಿ ಹೋದೆ ?
ಓ ನನ್ನ ಕನಸೇ
ನೀ ಯಾಕೆ ಹೀಗೆ
ಮಾಡಿದೆ ? ಹೊಸ ಆಸೆಗಳನ್ನು, ಆಕಾಂಕ್ಷೆಗಳನ್ನು ಹುಟ್ಟಿಸಿ ಮಾಯವಾದೆ ಯಾಕೆ?
ನಾನು ನಿನ್ನ ಎಷ್ಟೊಂದು ನಂಬಿಬಿಟ್ಟಿದ್ದೆ ಗೊತ್ತಿದೆಯಾ ? ನಿನ್ನ ನಂಬಿ
ನೂರಾರು ಆಸೆಗಳಿಗೆ ಜೀವ ತುಂಬಿದ್ದೆ. ಜೀವನ ಅನ್ನೋದು ಹೂವಿನ ದಾರಿ ಅನ್ನಿಸಿಬಿಟ್ಟಿತ್ತು. ನಿನ್ನಿಂದ ಎಷ್ಟು ಖುಷಿ ಆಗಿತ್ತು ಅಂದ್ರೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿತ್ತು. ಕನಸೇ...... ನೀನು ಬರಿಯ ಕನಸು ಅನ್ನೋದು ಈಗ ಅರ್ಥವಾಗಿದೆ. ಅರ್ಥವಾಗಲು ಇಷ್ಟೊಂದು ಸಮಯ ಬೇಕಾಯಿತು ನನಗೆ.
ದೂರ ನಿಂತು ಮಿನುಗುವ ನಕ್ಷತ್ರವಾದೆ ನೀನು. ಹತ್ತಿರದಲ್ಲಿಯೇ ಇರುವಂತೆ ಭಾಸವಾಗಿ ಮಾಯವಾದ ಮರೀಚಿಕೆ. ನಾನು
ನಿನ್ನ ಅಷ್ಟೊಂದು ನಂಬಿದ್ದೇ ನನ್ನ
ನೋವಿಗೆ ಕಾರಣವಾ ? ನೀನು ಕನಸಾಗಿಯೇ ಉಳಿದುಬಿಡುತ್ತಿಯಾ? ನಾನು ನಿನ್ನ
ನನಸ ರೂಪದಲ್ಲಿ ಕಾಣಲು ಸಾಧ್ಯವೇ ಇಲ್ಲವೇ?
ನನ್ನ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವದಕ್ಕೂ ನೀನು ಜೊತೆಗಿಲ್ಲ. ನನ್ನ
ಪ್ರಶ್ನೆಗಳು ಅನಾಥವಾಗಿವೆ ಉತ್ತರಗಳೇ ಇಲ್ಲದೆ...ಅವೂ ಕೂಡ ನನ್ನಂತೆ... ಏನೇ ಇರಲಿ.. ನಮ್ಮ ಕನಸು
ನಿರೀಕ್ಷೆ ನಿಜವಾಗದೆ ಇರಬಹುದು ಆದರೆ
ಜೀವನ ಪ್ರೀತಿಯನ್ನು ಹೆಚ್ಚಿಸಲು ಕನಸುಗಳು ಬೇಕೆ
ಬೇಕು. ಅಲ್ಲವೇ ? ಜೀವನದ ದಾರಿಯಲ್ಲಿ ನೀನೊಂದು ವಿಶೇಷ,
ವಿಸ್ಮಯ. ನನ್ನ ನೆನಪಲ್ಲಿ ಸದಾ
ನಿನಗಾಗಿ ಸ್ಥಳವಿರುತ್ತದೆ. ಮರೆಯ ಬೇಡ ನನ್ನ...
Subscribe to:
Post Comments (Atom)
“ಕ್ಯಾನ್ಸರ್”
ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್ ಒಂದು...
-
ಈಗ ಸರಿಯಾಗಿ ಒಂದು ವರ್ಷದ ಹಿಂದಿನ ಕಥೆ ಇದು. ಕ್ರಿಸ್ತ ಶಕ ಕರೊನಾ ಪೂರ್ವ ಕಾಲ ಅನ್ನಿ. ಆವತ್ತು ನಮ್ಮ ಮೂವರ ಸವಾರಿ ಗಿರಿನಗರದ ಗಣೇಶ್ ಮಾನಸಾ ಮನೆಗೆ ಹೋಗಿತ್ತು. ಮಾತುಗ...
-
ಆವತ್ತು ನಾನು ಅವನಿಗೆ ಸ್ವಲ್ಪ ಗಾಬರಿಯಿಂದ್ಲೇ ಫೋನ್ಮಾಡಿದ್ದೆ. ದನಿಯಲ್ಲಿ ಸ್ವಲ್ಪ ಕಂಪನವಿತ್ತು. ಕಣ್ಣಿನಲ್ಲಿ ನೀರು ಹರಳುಗಟ್ಟಿತ್ತು. ಮನಸ್ಸು ನಿಜಕ್ಕೂ ನೊಂದಿತ...
No comments:
Post a Comment