ಅರಣ್ಯ ಜೀವಿಯಾಗಿದ್ದ ಮಾನವ ನಾಗರಿಕನಾಗಿದ್ದು, ನಾಗರಿಕತೆಗಳು ಪ್ರಾರಂಭವಾದಾಗಿನಿಂದ. ನಾಗರಿಕತೆಗಳಿಂದಲೇ ಮಾನವನ ಸಾಮಾಜಿಕ ಜೀವನ ವಿಕಾಸವಾಗಲು ಪ್ರಾರಂಭವಾಯ್ತು. ಜಗತ್ತಿನಲ್ಲಿ ಅಸ್ತಿತ್ವದಲ್ಲಿದ್ದ ನಾಗರಿಕತೆಗಳಲ್ಲಿಯೇ ನಮ್ಮ ದೇಶದ ಸಿಂಧೂ ನಾಗರೀಕತೆ ಅತ್ಯಂತ ದೊಡ್ಡ ನಾಗರಿಕತೆ ಎಂದು ಗುರುತಿಸಿಕೊಂಡಿದೆ. ಇಂದಿನ ಪಾಕಿಸ್ತಾನದ ಭೂಮಿಯಲ್ಲಿಯೇ ಸುಮಾರು 4 ಸಾವಿರ ವರ್ಷಗಳ ಹಿಂದೆ ಸಿಂಧೂ ನಾಗರಿಕತೆ ಅಸ್ತಿತ್ವದಲ್ಲಿತ್ತು. ಸಿಂಧೂ ನಾಗರಿಕತೆಯ ಪ್ರಮುಖ ನಗರಗಳೇ ಹರಪ್ಪಾ ಮತ್ತು ಮೊಹೆಂಜೋದಾರೋ.
ಪುರಾತನ ಅಮೂಲ್ಯ ಕುರುಹುಗಳಿರುವ ಮೊಹೆಂಜೋದಾರೋ ನಗರ ಪ್ರಾಕೃತಿಕ ವಿಕೋಪಕ್ಕೆ ಒಳಪಟ್ಟು ಅಷ್ಟಟ್ಟಾಗಿ ನಶಿಸುತ್ತಾ ಇದೆ. ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಸಿಂಧೂನದಿಯಲ್ಲಿ ಕಾಣಿಸಿಕೊಂಡಿದ್ದ ಪ್ರವಾಹಕ್ಕೆ ಮೊಹೆಂಜೋದಾರೋ ತುತ್ತಾಗಿ ಹೋಗುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ ಅದೃಷ್ಟವಶಾತ್ ಪ್ರವಾಹದ ನೀರು ಮೊಹೆಂಜೋದೋರೋವನ್ನು ಆವರಿಸಲಿಲ್ಲ. ಆದರೆ ಸಪ್ಟೆಂಬರ್ 2012ರಲ್ಲಿಯ ಮಾನ್ಸೂನ್ ಮಳೆ ಇಲ್ಲಿನ ಪ್ರಾಚೀನ ಕಟ್ಟಡಗಳ ಕುರುಹಗಳಿಗೆ, ಗೋಡೆಗಳಿಗೆ ಅಪ್ಪಳಿಸಿತ್ತು. ಇದರಿಂದ ಇವಕ್ಕೆ ಸ್ಪಲ್ಪಮಟ್ಟಿಗೆ ಹಾನಿಯಾಗಿದೆ ಎಂಬ ಅಭಿಪ್ರಾಯ ಪ್ರಾಚ್ಯಶಾಸ್ತ್ರಜ್ಞರದು.
ದಶಕಗಳಿಂದ ಜಾರಿಯಲ್ಲಿರುವ ಉತ್ಕನನ ನಿಷೇಧ, ಪಾಕಿಸ್ತಾನದ ರಾಜಕೀಯ ವಿಪ್ಲವಗಳಿಂದ ಮತ್ತು ಅಸಮರ್ಪಕ ಸಂರಕ್ಷಣೆಯಿಂದಾಗಿ ಈ ಪ್ರಾಚೀನ ನಗರದ ಅಧ್ಯಯನ ಪ್ರಾಚ್ಯ ಶಾಸ್ತ್ರಜ್ಞರಿಗೆ ಸಾಧ್ಯವೇ ಆಗಲಿಲ್ಲ. ಸಿಂಧೂ ನಾಗರೀಕತೆಯ ಸಮಕಾಲೀನ ನಾಗರೀಕತೆಗಳಲ್ಲೊಂದಾದ ಈಜಿಪ್ಟ್ ಮತ್ತು ಮೆಸೆಪೊಟಾಮಿಯ ನಾಗರೀಕತೆಗಳಿಗೆ ಹೋಲಿಸಿದರೆ ಹರಪ್ಪಾ ಮತ್ತು ಮೊಹೆಂಜೋದಾರೊ ನಗರದ ಕುರುಹುಗಳಲ್ಲಿ ಸಂರಕ್ಷಣೆಯ ಕೊರತೆ ಎದ್ದು ಕಾಣುತ್ತದೆ. ಇಲ್ಲಿಯ ಸ್ಮಾರಕಗಳು, ದೇವಸ್ಥಾನಗಳು, ಶಿಲ್ಪಗಳು ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದು ಗೋಚರಿಸುತ್ತದೆ. ಹೀಗಾಗಿ ಈ ನಾಗರೀಕತೆಯ ಬಗ್ಗೆ, ಇದರ ನಿಜವಾದ ಹೆಸರು, ಈ ನಗರದ ನಿರ್ಮಾತೃ ಹಾಗೂ ಇದರ ನಿಜವಾದ ವಿಸ್ತೀರ್ಣದ ಬಗ್ಗೆ ಅಧ್ಯಯನಕಾರರಿಗೆ ಇಂದಿಗೂ ಸಮರ್ಪಕ ಮಾಹಿತಿ ದೊರಕಿಲ್ಲ. ಅದೆಷ್ಟೋ ರಹಸ್ಯಗಳನ್ನು,ರೋಚಕ ಇತಿಹಾಸವನ್ನು, ತನ್ನೊಳಗೆ ಹುದುಗಿಸಿಕೊಂಡಿರುವ ಮೊಹೆಂಜೋದಾರೋ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇದೆ. ಇಂದಿನ ಭೂಗರ್ಭ ಶಾಸ್ತ್ರಜ್ಞರು ಹಿಂದಿನ ಉತ್ಕನನದ ಮಾಹಿತಿಗಳನ್ನೇ ಅಧ್ಯಯನ ಮಾಡುತ್ತಿರುವುದರಿಂದ ತಾಮ್ರ ಯುಗದ ಸಿಂಧೂ ನಾಗರೀಕತೆಯಲ್ಲಿ ಅತ್ಯಂತ ದೊಡ್ಡ ನಗರ ಯಾವುದು ಎಂಬುವುದರ ಬಗ್ಗೆ ಖಚಿತತೆ ಇಲ್ಲ.
ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಂiಜನಾ ಬದ್ಧ ನಗರ ನಿರ್ಮಾಣವಾಗಿತ್ತು. ಸುಸಜ್ಜಿತ ಮನೆಗಳು, ಸುಸಜ್ಜಿತ ಸಾರ್ವಜನಿಕ ಸ್ನಾನಗೃಹಗಳು, ವಿಶಾಲವಾದ ರಸ್ತೆಗಳು, ಕೆರೆ ಬಾವಿಗಳು ಹಾಗೂ ಒಳಚರಂಡಿಗಳು ಹರಪ್ಪಾ ಮತ್ತು ಮೊಹೆಂಜೋದಾರೋ ನಗರಗಳಲ್ಲಿದ್ದವು. ಹಲವು ಮೆಟ್ಟಿಲುಗಳ ದೇವಾಲಯಗಳು, ಪ್ರಫುಲ್ಲ ಶಿಲ್ಪಗಳು ನಗರದ ಭವ್ಯತೆಯನ್ನು ಹೆಚ್ಚಿಸಿದ್ದವು. ಅಮೂಲ್ಯ ಹರಳು ಮತ್ತು ಲೋಹಗಳನ್ನು ಬಳಸಿದ ಕಲಾಕೃತಿಗಳು ಮತ್ತು ಆಭರಣಗಳೇ ಇವರಲ್ಲಿದ್ದ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ. ಹೀಗಾಗಿ ಮೊಹೆಂಜೋದಾರೋ ನಗರ ಅತ್ಯಂತ ಉತ್ತಮ ಜೀವನ ಪದ್ಧತಿಯನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ. ರೋಮನ್ ನಾಗರೀಕತೆಗಿಂತಲೂ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಸಿಂಧೂ ನಾಗರೀಕತೆಯಲ್ಲಿ ಈ ಪರಿಯ ಉತ್ತಮ ಜೀವನ ಮಟ್ಟವಿತ್ತು.
ಮುಂಬರುವ ದಿನಗಳಲ್ಲಿ ಭೂಗರ್ಭ ಶಾಸ್ತ್ರಜ್ಞರಿಂದ ಮತ್ತಷ್ಟು ಅಧ್ಯಯನಗಳು ನಡೆಯಲಿವೆ. ಇತ್ತೀಚೆಗಷ್ಟೇ ನಿರ್ವತ್ತಿಯಾದ ಆಚೆನ್ ವಿಶ್ವವಿದ್ಯಾಲಯದ ಪ್ರಾಚೀನ ಅಧ್ಯಯನಕಾರರಾದ ಮೈಕೆಲ್ ಜಾನ್ಸನ್ ’ಮೊಹೆಂಜೋದಾರೋ ನಗರವಿದ್ದ ಈ ಸ್ಥಳದ ಮಣ್ಣಿನಲ್ಲಿ ಮತ್ತಷ್ಟು ವಿಷಯಗಳು ಹುದುಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.ಇವರ ಪ್ರಕಾರ ಸಿಂಧೂ ನಾಗರಿಕತೆಯ ನಗರ ಜೀವನ ಹಿಂದಿನ ಉತ್ಕನನದಿಂದ ಸರಿಯಾಗಿ ತಿಳಿದುಬಂದಿಲ್ಲ. ಇನ್ನೂ ಹಲವಾರು ಕಟ್ಟಡಗಳು, ಹಲವು ಪ್ರಾಚೀನ ಪ್ರದೇಶಗಳ ಉತ್ಕನನವಾದಾಗ ಮಾತ್ರ ಮತ್ತಷ್ಟು ವಿಷಯಗಳು ಬೆಳಕಿಗೆ ಬರಬಹುದು. ಇಂದಿನ ಪಾಕಿಸ್ತಾನ ಸರಕಾರ ಹೊಸ ಉತ್ಕನನಕ್ಕೆ ಸಿದ್ಧವಿದೆ. ಹರಪ್ಪಾ ಮತ್ತು ಮೊಹೆಂಜೋದಾರೋ ಬಗ್ಗೆ ಮತ್ತಷ್ಟು ಸತ್ಯಗಳನ್ನು ತಿಳಿಯಲು ಉತ್ಸಾಹ ತೋರುತ್ತಿದೆ. ನಗರ ಪ್ರದೇಶ ಎಲ್ಲಿಂದ ಪ್ರಾರಂಭವಾಗಿ ಎಲ್ಲಿಯವರೆಗೆ ಹಬ್ಬಿರಬಹುದು ಎಂಬ ವಿಷಯದ ಕುರಿತು ನಿಖರ ಮಾಹಿತಿಗಾಗಿ ಹೊಸ ಉತ್ಕನನ ಸಧ್ಯದಲ್ಲಿಯೇ ಪ್ರಾರಂಭವಾಗುತ್ತದೆ ಎಂಬುದು ಭೂಗರ್ಭ ಶಾಸ್ತ್ರಜ್ಞರ ಹೊಸ ನಿರೀಕ್ಷೆ.
ಸಿಂಧೂ ನಾಗರೀಕತೆಯು ಕ್ರಿ.ಪೂ 2600 ರಿಂದ ಕ್ರಿ.ಪೂ 1900ರ ತನಕ ಅಸ್ತಿತ್ವದಲ್ಲಿತ್ತು ಎಂಬುದು ಅಧ್ಯಯನಕಾರರ ಅಂದಾಜು. ಇಂದಿನ ಪಾಕಿಸ್ತಾನದ ಬಹುಭಾಗ ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಸಿಂಧೂ ನಾಗರೀಕತೆ ಹಬ್ಬಿತ್ತು. 1920ರಲ್ಲಿ ಪ್ರಾರಂಭವಾಗಿದ್ದ ಮೊದಲ ಉತ್ಕನನದವರೆಗೂ ಈಜಿಪ್ಟ್ ಮತ್ತು ಮೆಸೆಪೊಟಾಮಿಯಾ ನಾಗರೀಕತೆಯೇ ಹಳೆಯದೆಂದು ತಿಳಿದಿದ್ದ ಪುರಾತನ ವಾಸ್ತು ಶಾಸ್ತ್ರಜ್ಞರಿಗೆ, ಉತ್ಕನನದ ನಂತರ ಇದು 4 ಸಾವಿರ ವರ್ಷಗಳಷ್ಟು ಹಳೆಯದು ಎಂಬ ಸತ್ಯ ಅರಿವಾಯಿತು. ಆದರೆ 1850ರಲ್ಲಿ ಬ್ರಿಟೀಷರು ಲಾಹೋರಿಗೆ ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡುವಾಗ ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಹಲವು ಪುರಾವೆಗಳು ನಾಶವಾಗಿಹೋಗಿರುವ ಕಾರಣ ಅಧ್ಯಯನಕಾರರ ಅಂದಾಜಿಗೆ ಸತ್ವ ದೊರೆಯಲಿಲ್ಲ. ಪ್ರಥಮ ಉತ್ಕನನ ಪ್ರಾರಂಭವಾಗಿದ್ದು 1920ರಲ್ಲಿ ಹರಪ್ಪಾ ನಗರದಿಂದ. ಒಂದು ತಿಂಗಳ ನಂತರ ಮೊಹೆಂಜೋದಾರೋ ನಗರದಲ್ಲಿಯೂ ಉತ್ಕನನ ಆರಂಭವಾಯ್ತು.ಸುಟ್ಟ ಇಟ್ಟಿಗೆಗಳಿಂದ ತಳಪಾಯ ಹಾಕಿ ನಿರ್ಮಾಣ ಮಾಡಿದ್ದ ಕಾರಣ ಇಲ್ಲಿಯ ಕಟ್ಟಡಗಳ ಅವಶೇಷಗಳು ನಾಲ್ಕು ಸಾವಿರ ವರ್ಷಗಳ ನಂತರವೂ ಅದೃಷ್ಟವಶಾತ್, ಉಳಿದುಕೊಂಡಿದ್ದವು.
ಸುಂದರ ಮೊಹೆಂಜೋದಾರೋ ನಗರ ಸಿಂಧೂ ನದಿಯ ದಡದಲ್ಲಿತ್ತು. ಸುಮಾರು 600 ಎಕರೆಗಳಷ್ಟು ವಿಸ್ತೀರ್ಣದಲ್ಲಿದ್ದ ಈ ಮಹಾನಗರ ಸುಮಾರು ನಲವತ್ತು ಸಾವಿರ ಜನಸಂಖ್ಯೆ ಹೊಂದಿತ್ತು ಎನ್ನಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, ಮೊಹೆಂಜೋದಾರೋ ನಗರದಲ್ಲಿ ಒಂದು ಲಕ್ಷ ಜನಸಂಖ್ಯೆ ಇತ್ತು ಮತ್ತು ಈಜಿಪ್ಟ್ ನಾಗರೀಕತೆಯ ಮೆಂಪಿಸ್, ಮೆಸೆಪೊಟಾಮಿಯಾದ ಉರ್ ನಗರಗಳಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿತ್ತು ಎಂಬುದು ತಿಳಿದು ಬಂದಿದೆ. ಈ ನಗರದ ವಾಯವ್ಯ ಭಾಗದಲ್ಲಿದ್ದ, 60ಕ್ಕೂ ಹೆಚ್ಚು ಆಳವಾದ ಬಾವಿಗಳು, ಸುಸಜ್ಜಿತ ತಳಪಾಯಗಳನ್ನು ಒಳಗೊಂಡ ಕೋಟೆಯ ಅರಮನೆಯನ್ನು ಮೊದಲ ಉತ್ಕನನದಲ್ಲಿ ಗಮನಿಸಿರಲೇ ಇಲ್ಲ ಎಂಬ ವಿಷಯ ಬೆಳಕಿಗೆ ಬಂತು. 1940ರಿಂದ 1950ರ ತನಕ ವಿರಳವಾದ ಉತ್ಕನನ ನಡೆದಿತ್ತು. ಆದರೆ ಪ್ರಮುಖ ಉತ್ಕನನ ನಡೆದಿದ್ದು 1960ರಲ್ಲಿ. ಆ ನಂತರ ಅಲ್ಲಿ ಯಾವುದೇ ಅಧ್ಯಯನ ನಡೆದಿರಲೇ ಇಲ್ಲ. ಯಾಕೆಂದರೆ, ಪಾಕಿಸ್ತಾನ ಸರಕಾರ ಮತ್ತು ಯುನೆಸ್ಕೋ ನಡೆಸುತ್ತಿದ್ದ ಉತ್ಕನನದಿಂದಾಗಿ ಕ್ರಮೇಣ ನಾಗರೀಕತೆಯ ಕುರುಹುಗಳಿಗೆ ಧಕ್ಕೆ ಉಂಟಾಗಲು ಪ್ರಾರಂಭವಾಗಿತ್ತು. ವಿಪರೀತ ಚಳಿಗಾಳಿ ಹಾಗೂ ಉಪ್ಪಿನ ಅಂಶವಿರುವ ವಾತಾವರಣದಿಂದ ಪ್ರಾಚೀನ ಇಟ್ಟಿಗೆಗಳು ಚೂರಾಗಲು ಪ್ರಾರಂಭವಾದವು. ಇವುಗಳನ್ನು ಉಳಿಸಿಕೊಳ್ಳಲು ಎಷ್ಟೇ ವೆಚ್ಚ ಮಾಡಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಉತ್ಕನನವನ್ನೇ ಕೈಬಿಡಲಾಗಿತ್ತು.
ಪುರಾತನ ವಾಸ್ತುಶಾಸ್ತ್ರಜ್ಞರು ಎಷ್ಟೇ ಅಧ್ಯಯ ನಡೆಸಿದರೂ ಮೊಹೆಂಜೋದಾರೋ ನಗರಗಳಲ್ಲಿ, ಇದರ ಸಮಕಾಲೀನ ನಾಗರೀಕತೆಗಳಾದ ಈಜಿಪ್ಟ್ ಮತ್ತು ಮೆಸೆಪೊಟಾಮಿಯಾ ನಾಗರೀಕತೆಗಳಲ್ಲಿ ದೊರಕಿದಂತಹ ಯಾವುದೇ ಸಮಾಧಿಗಳಾಗಲೀ, ಸ್ಮಾರಕಗಳಾಗಲೀ ಸಿಗಲಿಲ್ಲ. ಆದರೆ ಈ ನಗರದ ವಾಯವ್ಯ ಭಾಗದಲ್ಲಿದ್ದ ಕೋಟೆಯ ಅರಮನೆಯಲ್ಲಿ, ಸುಸಜ್ಜಿತ ಧಾನ್ಯಾಗಾರ, ಸ್ನಾನಗೃಹ, ಭವ್ಯ ಸಭಾಂಗಣಗಳು ಮತ್ತು ನಗರ ವ್ಯವಸ್ಥೆಯ ಕುರುಗಳು ಸಿಕ್ಕವು. ಆದರೆ, ಸಿಂಧೂ ನಾಗರೀಕತೆ ಉಗಮವಾದ 700 ವರ್ಷಗಳ ನಂತರ ಮೊಹೆಂಜೋದಾರೋ ನಗರ ನಾಶವಾಯಿತು. ಇದಕ್ಕೆ ಸ್ಪಷ್ಟ ಕಾರಣಗಳು ಇಂದಿಗೂ ತಿಳಿದಿಲ್ಲ. ಅಲ್ಲಿಯ ರಾಜಕೀಯ ನೀತಿ, ಧಾರ್ಮಿಕ ಪದ್ಧತಿ, ಲೆಕ್ಕಾಚಾರ, ವ್ಯಾಪಾರ ವ್ಯವಹಾರದ ಬಗ್ಗೆ ಕರಾರುವಕ್ಕಾಗಿ ತಿಳಿಸುವ ಯಾವ ಪುರಾವೆಯೂ ಪುರಾತನ ಶಾಸ್ತ್ರಜ್ಞರಿಗೆ ಪತ್ತೆಯಾಗಲಿಲ್ಲ.
ಉತ್ಕನನದಿಂದ ಪ್ರಯೋಜನವಾಗುತ್ತಿಲ್ಲ, ಇತಿಹಾಸದ ಕುರಿತು ಸಾಕಷ್ಟು ಮಾಹಿತಿ ದೊರಕುತ್ತಿಲ್ಲ. ಎಂದು 20ನೇಶತಮಾನದ ಉತ್ಕನನದಲ್ಲಿ ಪಾಲ್ಗೊಂಡಿದ್ದ ರೋಮನ್ ಪ್ರಾಚ್ಯ ಶಾಸ್ತ್ರಜ್ಞ ಗಿಸೆಪ್ಪೆ ತುಸ್ಸಿ ಹೇಳಿದ್ದರು. ಕೆಲವು ದಶಕಗಳ ನಂತರ ಇಲ್ಲಿ ಅಧ್ಯಯನ ನಡೆಸಿದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಯದ ಪ್ರಾಚ್ಯ ಶಾಸ್ತ್ರಜ್ಞ ಗ್ರಿಗೋರಿ ಪೋಶೆಲ್ ಇಲ್ಲಿ ಯಾವುದೇ ರಾಜನ ಹೆಸರುಗಳಾಗಲೀ, ಸಾಮಾಜಿಕ ವ್ಯವರ್ಸಥೆಯ ಬಗ್ಗೆಯಾಗಲೀ, ಕಾಲಗಣನೆಯ ಲೆಕ್ಕಾಚಾರಕ್ಕೆ ಪುಷ್ಠಿಕೊಡುವ ಯಾವುದೇ ದಾಖಲೆಗಳಾಗಲೀ ಇಲ್ಲಿ ಲಭ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.
ಈ ಸಿಂಧೂ ನಾಗರಿಕತೆಯಲ್ಲಿ ನೂರಕ್ಕೂ ಹೆಚ್ಚು ಚಿಕ್ಕಚಿಕ್ಕ ನಗರಗಳೂ ಹಾಗೂ ಸಾಕಷ್ಟು ಹಳ್ಳಿಗಳೂ ಇದ್ದವು ಎಂಬುವುದರ ಬಗ್ಗೆ ಅನುಮಾನವಿರಲಿಲ್ಲ. ಈ ನಾಗರೀಕತೆಯು ಕೇವಲ ಏಕಧರ್ಮೀಯತೆಯನ್ನು ಹೊಂದಿರಲಿಲ್ಲ. ಇಲ್ಲಿ ಹಲವು ಮತ ಪಂತಗಳೂ ಇದ್ದವು ಎಂದು ಹೇಳಲಾಗಿದೆ. 625000 ಸ್ಕ್ವೇರ್ ಮೈಲ್ಸ್‌ನ ವಿಸ್ತೀರ್ಣ ಹೊಂದಿದ್ದ ಸಿಂಧೂ ನಾಗರಿಕತೆಯ ಭೌಗೋಳಿಕ ವಿಸ್ತೀರ್ಣ 1920ರ ಉತ್ಕನನ ಕಾಲದಲ್ಲಿ ಅಂದಾಜಿಸಲ್ಪಟ್ಟ ವಿಸ್ತೀರ್ಣಕ್ಕಿಂತಲೂ ಬಹಳ ದೊಡ್ಡದು ಎಂಬುದು ನಂತರದ ಉತ್ಕನನದಲ್ಲಿ ತಿಳಿಯಲಾಯಿತು. ಈಜಿಪ್ಟ್ ಮತ್ತು ಮೆಸೆಪೊಟಾಮಿಯಾ ನಾಗರಿಕತೆಗಳಿಗಿಂತಲೂ ದೊಡ್ಡ ವಿಸ್ತೀರ್ಣ ಹೊಂದಿತ್ತು. ಇರಾನ್, ಅಪಘಾನಿಸ್ತಾನ್‌ದಿಂದ ನಮ್ಮ ದೇಶದ ದೆಹಲಿಯ ತನಕ ಸಿಂಧೂ ನಾಗರಿಕತೆ ಹಬ್ಬಿತ್ತು. ಈ ಪ್ರದೇಶದಾದ್ಯಂತ ಲಭ್ಯವಾದ ಶಿಲೆಗಳು ಲೋಹಗಳಿಂದ ಸಿಂಧೂ ನಾಗರೀಕತೆಯ ವಿಸ್ತೀರ್ಣವನ್ನು ಇಂದಿಗೂ ಅಳೆಯಲಾಗುತ್ತಿದೆ. ಇಲ್ಲಿಯ ವ್ಯಾಪಾರಿಗಳು ಅರೇಬಿಂiiನ್ನರು ಮತ್ತು ಮೆಸೆಪೊಟಾಮಿಯನ್ನರೊಂದಿಗೆ ವ್ಯವಹರಿಸುತ್ತಿದ್ದರು. ಎಂಬುದು ಇತ್ತೀಚೆಗೆ ಅಂದರೆ 2008ರಲ್ಲಿ ಉತ್ಕನನ ನಡೆಸಿದ ವಿಸ್ಕೊನ್ಸಿನ ವಿಶ್ವವಿದ್ಯಾಲಯದ ಪ್ರಾಚ್ಯ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮೊಹೆಂಜೋದಾರೋ ನಗರ ಪ್ರಪಂಚದ ಮೊದಲ ಅತ್ಯಂತ ಪ್ರಾಚೀನ, ಸುಸಜ್ಜಿತ ಮತ್ತು ನಿಯೋಜಿತ ನಗರ. ಸುಮಾರು ಕ್ರಿ.ಪೂ ಮೂರು ಸಾವಿರ ವರ್ಷಗಳ ಹಿಂದೆ ನಗರ ನಿರ್ಮಾಣ ಕಾರ್ಯಗಳು ಆರಂಭವಾಗಿದ್ದವು ಎಂದು ನಂಬಲಾಗಿದೆ. ಸಿಂಧೂ ನದಿಯ ದಂಡೆಯ ಮೇಲೆ 20ಅಡಿ ಅಗೆದು ಉತ್ಕನನ ನಡೆಸಿದಾಗ, ಹಲವು ಅಪರೂಪದ ಕುರುಹುಗಳು ಸಿಕ್ಕವು. ಸಿಂಧೂ ನಾಗರಿಕತೆ ನಾಶವಾಗಲು ಸಿಂಧೂ ನದಿಯ ಪ್ರವಾಹಗಳೂ ಒಂದು ಕಾರಣ ಎಂದು ಇಟಾಲಿಯನ್ ಪ್ರಾಚ್ಯ ಶಾಸ್ತ್ರಜ್ಞ ಮೊಶಿಮೊ ವೈಡಲ್ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಇವರ ಅಭಿಪ್ರಾಯವನ್ನು ವಿಸ್ಕೊನ್ಸಿನ್ ವಿಶ್ವ ವಿದ್ಯಾಲಯದ ಪ್ರಾಚ್ಯ ಶಾಸ್ತ್ರಜ್ಞ ಜೊನಾಥನ್ ಮಾರ್ಕ್ ಕೆನೋಯರ್ ಕೂಡ ಒಪ್ಪಿದ್ದಾರೆ.
ಮೊಹೆಂಜೋದಾರೋ ನಗರದಲ್ಲಿರುವ ಭವ್ಯ ಕೋಟೆಯ ನಿರ್ಮಾಣ ಕೂಡ ಯೋಜನಾಬದ್ಧವಾಗಿತ್ತು ಬಲಿಷ್ಠ ಗೋಡೆಗಳನ್ನೊಳಗೊಂಡ ಈ ಕೋಟೆ 200 ಯಾರ್ಡ್ಸ್ ಉದ್ದ ಮತ್ತು 400 ಯಾರ್ಡ್ಸ್ ಅಗಲ ಹೊಂದಿತ್ತು. 1920ರ ಉತ್ಕನನದ ಅವಧಿಯಲ್ಲಿ ಈ ಕೋಟೆಯನ್ನು ಬೌದ್ಧ ಸ್ತೂಪ ಎಂದು ನಂಬಲಾಗಿತ್ತು. ಆದರೆ ೨೦೦೭ರಲ್ಲಿ ನೇಪಾಳ ವಿಶ್ವವಿದ್ಯಾಲಯದ ನಿವೃತ್ತ ಪ್ರಾಚ್ಯಶಾಸ್ತ್ರಜ್ಞ ಗಿವಾನಿ ವೆರಾರ್ದಿ ಇದು ಬೌದ್ಧ ಶೈಲಿಯ ಸ್ಮಾರಕವಲ್ಲ. ಬೌದ್ಧರ ಸಾಂಪ್ರದಾಯಿಕ ಶೈಲಿಯ ಕುರುಹುಗಳು ಇದರಲ್ಲಿ ಇಲ್ಲ ಎಂದು ತಿಳಿಸಿದರು. ಸಿಂಧೂ ನಾಗರಿಕತೆಯ ಕೋಟೆ ಇದಾಗಿರಬಹುದು ಎಂದು ಅಂದಾಜಿಸಿದರು. ಮೊಹೆಂಜೋದಾರೋ ನಗರದ ಯೋಜನೆ ಮತ್ತು ಹರಪ್ಪಾ, ದೋಲವಿರಾ ನಗರದ ಯೋಜನೆಗಳಲ್ಲಿ ಸಾಮ್ಯತೆ ಕಂಡಿದೆ. ಸಿಂಧೂ ನಾಗರಿಕತೆಗೆ ಒಳಪಟ್ಟ ಪ್ರದೇಶಗಳು ಇಂದಿನ ನಮ್ಮ ಗುಜರಾತ್‌ನಲ್ಲಿಯೂ ಕಂಡುಬಂದಿದೆ. ಈ ಎಲ್ಲಾ ಪುರಾತನ ಕಟ್ಟಡಗಳ ಕುರುಹುಗಳನ್ನು ಕಂಡಾಗ ಅತ್ಯಂತ ವಿಶಾಲ ಮತ್ತು ಸುಂದರ ಮೆನಗಳನ್ನು ಈ ನಾಗರಿಕತೆ ಇಷ್ಟ ಪಡುತ್ತಿತ್ತು ಎಂಬುದು ಗೋಚರಿಸುತ್ತಿದೆ. ಉತ್ಕನನದಲ್ಲಿ ದೊರಕಿದ ಮನೆಯ ಅವಶೇಷದಲ್ಲಿ 136 ವಿಶಾಲ ಕೊಠಡಿಗಳಿರುವುದು ಪತ್ತೆಯಾಗಿದೆ. 1920ರಲ್ಲಿ ನಡೆದ ಉತ್ಕನನದಲ್ಲಿ ಸಾಕಷ್ಟು ಪುರಾತನ ಗೋಲಾಕಾರದ ಕಲ್ಲುಗಳು ದೊರೆತಿದ್ದವು. ದೊಲವಿರಾದಲ್ಲಿ ಇತ್ತೀಚೆಗೆ ನಡೆದ ಉತ್ಕನನದಲ್ಲಿ ಕಲ್ಲುಗಳಿಂದಲೇ ನಿರ್ಮಾಣ ಮಾಡಿದ್ದ ಕಟ್ಟಡಗಳ ಸ್ಮಾರಕಗಳು ದೊರೆತಿವೆ. ಕಲ್ಲುಗಳ ಕಂಭಗಳನ್ನೇ ಉಪಯೋಗಿಸಿದ್ದು ಕಂಡುಬಂದಿವೆ. ಯೋಜನಾ ಬದ್ಧ ಅಮೂಲ್ಯ ಕಲ್ಲುಗಳಿಂದ ನಿರ್ಮಾಣ ಮಾಡಲಾದ ಮನೆಗಳು ಮೊಹಿಂಜೋದಾರೋ ನಾಗರಿಕತೆಯ ಜೀವನ ಮಟ್ಟವನ್ನು ತಿಳಿಸುತ್ತವೆ ಎಂದು ಮೈಡಲ್ ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ಇದು ಏಕಚಕ್ರಾಧಿಪತ್ಯಕ್ಕೆ ಒಳಪಟ್ಟಿರಬಹುದು ಎಂದೂ ಅಂದಾಜಿಸಿದ್ದಾರೆ ಏಕೆಂದರೆ ಎಲ್ಲ ಪ್ರದೇಶಗಳಲ್ಲಿಯೂ ಕಂಡು ಬಂದಿರುವ ಒಂದೇ ರೀತಿಯ ಯೋಜನೆಗಳು ಮತ್ತು ವ್ಯತ್ಯಾಸವಿರದ ಕಟ್ಟಡ ನಿರ್ಮಾಣ ಶೈಲಿಗಳು ಈ ಊಹೆಗೆ ಪುಷ್ಠಿ ನೀಡಿವೆ.
ಉತ್ತರ ಬಲುಚಿಸ್ತಾನದಿಂದ ಪಶ್ಚಿಮದವರೆಗೆ ಮತ್ತು ಉತ್ತರ ಪಾಕಿಸ್ತಾನ ಅಥವಾ ರಾಜಸ್ತಾನದಿಂದ ಪೂರ್ವದವರೆಗಿನ ಸಿಂಧೂ ನಾಗರಿಕತೆಯ ಪ್ರದೇಶಗಳಲ್ಲ ತೋಪು ಹಾಗೂ ಒನಕೆಗಳು ದೊರೆತಿವೆ. ರೋಹರಿ ಪರ್ವತಗಳಲ್ಲಿ ಹಾಗೂ ಥಾರ್ ಮರುಭೂಮಿಗಳಲ್ಲಿಯೂ ಸಿಂಧೂ ನಾಗರಿಕತೆಯ ಕುರುಹುಗಳು ಕಂಡಿವೆ. ಪಾಕಿಸ್ತಾನಿ ಪ್ರಾಚ್ಯ ಶಾಸ್ತ್ರಜ್ಞ ಕ್ವಾಸಿದ್ ಮಲ್ಲಾಹ್ ಈ ಪ್ರದೇಶದಲ್ಲಿ ಸಿಂಧೂ ನಾಗರಿಕತೆಯ ಸೈನ್ಯದ ಪಾಳೆಯಗಳು ಇದೇ ಪ್ರದೇಶದಲ್ಲಿದ್ದವು. ಇದೊಂದು ರೋಚಕ ಸ್ಥಳವಾಗಿತ್ತು ಎಂದು ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ.
ಸಿಂಧೂ ನಾಗರಿಕತೆಗಳಲ್ಲಿ ಕಂಡುಬಂದ ವಿಶೇಷಗಳಲ್ಲಿ ಪ್ರಮುಖವಾಗಿರುವುದು ಕೊಳಾಯಿ ವ್ಯವಸ್ಥೆ. ಯೋಜನಾಬದ್ಧ ಕೊಳಾಯಿ ವ್ಯವಸ್ಥೆಯಿಂದ ಕೆರೆ, ಬಾವಿಗಳ ನೀರನ್ನು ಸಮರ್ಪಕವಾಗಿ ಬಳಸುತ್ತಿದ್ದರು. ಈಜಿಪ್ಟ್ ಮತ್ತು ಮೆಸೆಪೊಟಾಮಿಯಾ ನಾಗರಿಕತೆಗಳಲ್ಲಿ ಇಂತಹ ವ್ಯವಸ್ಥೇ ಇರಲೇ ಇಲ್ಲ. ಪ್ರಾಚ್ಯ ಶಾಸ್ತ್ರಜ್ಞ ಜಾನ್‌ಸೆನ್‌ರ ಪ್ರಕಾರ ಸಿಂಧೂ ನಾಗರಿಕರ ಎಲ್ಲರ ಮನೆಯಲ್ಲಿಯೂ ಸ್ನಾನಗೃಹ ಮತ್ತು ಶೌಚಾಲಯ ಇತ್ತು. ಚಂರಂಡಿ ವ್ಯವಸ್ಥೆಯನ್ನು ಅಷ್ಟೇ ಸಮರ್ಪಕವಾಗಿ ಕಲ್ಪಿಸಿದ್ದರು.
ಕ್ರಿ.ಪೂ 1900ರ ಈಚೆಗೆ ಸಿಂಧೂ ನಾಗರಿಕತೆ ನಾಶವಾಯಿತು. ಆದರೆ ಇದರ ವಿನಾಶಕ್ಕೆ ನಿರ್ದಿಷ್ಠ ಕಾರಣ ಇಂದಿಗೂ ದೊರಕಿಲ್ಲ. 1940ರ ಉತ್ಕನನದಲ್ಲಿ ಸಿಕ್ಕ ಅಸ್ತಿಪಂಜರಗಳು ಈ ಪ್ರದೇಶದ ಬಗ್ಗೆ ಇದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದವು. ಹಲವು ಊಹೆಗಳನ್ನು ಹುಟ್ಟಿಸಿದ್ದವು. ಪ್ರಾಚ್ಯ ಶಾಸ್ತ್ರಜ್ಞರ ಪ್ರಕಾರ ಉತ್ತರ ಮತ್ತು ಪಶ್ಚಿಮದಿಂದ ದಾಳಿ ಇಟ್ಟ ಆರ್ಯನ್ನರಿಂದಾಗಿ ಈ ಜನಾಂಗಗಳು ನಾಶವಾದವು. ಆದರೆ ಇನ್ನೊಂದು ಊಹೆಯ ಪ್ರಕಾರ ಸಿಂಧೂ ನದಿಯ ಪ್ರವಾಹಕ್ಕೆ ತುತ್ತಾಗಿ ನಾಗರಿಕತೆ ನೆಲೆನಿಂತ ಪ್ರದೇಶಗಳಲ್ಲಿ ಜಲಸಮಾಧಿಯಾದವು. ವಿನಾಶದ ಅಂಚಿನಲ್ಲಿರುವ ಸಿಂಧೂ ನಾಗರಿಕತೆಯಲ್ಲಿ ರಾಜಕೀಯ ವಿಪ್ಲವಗಳು ಆರ್ಥಿಕ ಮುಗ್ಗಟ್ಟು ಕೂಡ ಆವರಿಸಲ್ಪಟ್ಟಿದ್ದವು ಎಂದೂ ನಂಬಲಾಗಿದೆ. ವಾತಾವರಣದಲ್ಲಿ ಆದ ದಿಢೀರ್ ಬದಲಾವಣೆ ಕೂಡ ನಾಗರಿಕತೆಯ ಅಂತ್ಯಕ್ಕೆ ಕಾರಣವಾಗಿರಲೂಬಹುದು. ಈ ಪ್ರದೇಶದಲ್ಲಿ ಕಾಡಿದ ಯಾವುದೋ ಮಹಾಮಾರಿಗೆ ಬಲಿಯಾಗಿರಬಹುದು ಅಥವಾ ರೋಗಗಳಿಗೆ ಹೆದರಿ ಊರುಬಿಟ್ಟು ಬೇರೆ ಪ್ರದೇಶಗಳಿಗೆ ಪಲಾಯನ ಮಾಡಿರಬಹುದು. ಇಂತಹ ಊಹೆಗಳು ಇವೆಯಾದರೂ ಯಾವುದೇ ಒಂದು ನಿರ್ದಿಷ್ಟ ಕಾರಣ ದೊರಕಿಲ್ಲ. ೧೯೨೦ರಿಂದ ನಡೆದ ಎಲ್ಲಾ ಉತ್ಕನನಗಳಿಂದ ನಾವು ತಿಳಿದುಕೊಂಡಿದ್ದು ಕೇವಲ ಶೇಕಡಾ 60ರಷ್ಟು ಮಾತ್ರ. ಇನ್ನೂ ನಾವು ತಿಳಿಯಬೇಕಾಗಿರುವುದು ಸಾಕಷ್ಟಿದೆ ಎಂದಿದ್ದಾರೆ. ಪ್ರಾಚ್ಯಶಾಸ್ತ್ರಜ್ಞ ಜಾನ್ಸೆನ್.
ಪಾಕಿಸ್ತಾನದ ವಸ್ತು ಸಂಗ್ರಹಾಲಯ ಮತ್ತು ಪ್ರಾಚೀನ ನೆಲೆಗಳ ಮಹಾ ನಿರ್ದೇಶಕ ’ಫಸದ್ ದದ್ ಕಕ್ಕರ್’ ಈ ಪ್ರದೇಶದ ಸಂರಕ್ಷಣೆಯ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಮೊಹೆಂಜೋದಾರೋ ನೆಲೆಯ ಸುತ್ತ ಒಂದು ವಲಯ ಸೃಜಿಸಿ ರೇಡಿಯೋ ಕಾರ್ಬನ್ ಪದ್ಧತಿಯಲ್ಲಿ ಸಸ್ಯ - ಪ್ರಾಣಿಗಳ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಗರದ ನಿಜವಾದ ವಿಸ್ತೀರ್ಣ ತಿಳಿಯಲಾಗುತ್ತದೆ ಎಂದು ತಿಳಿಸಿದ್ದಾರೆ. ವಿಶ್ವ ಪಾರಂಪರಿಕ ಪಟ್ಟಿಗೆ ಒಳಪಟ್ಟ ಈ ಪ್ರದೇಶದಲ್ಲಿ ಉತ್ತಮ ಉತ್ಕನನ ನಡೆದು ಇದರ ಹೃದಯದಲ್ಲಿ ಹುದುಗಿದ್ದ ಸತ್ಯಗಳು ಅನಾವರಣಗೊಳ್ಳಬೇಕಿದೆ. ಪ್ರಪಂಚದ ಅತ್ಯಂತ ದೊಡ್ಡ ಮತ್ತು ಪುರಾತನ ನಾಗರಿಕತೆಯ ಕುತೂಹಲಕಾರಿ ಇತಿಹಾಸ ತಿಳಿಯಬೇಕಿದೆ.
ಅನುವಾದ : ಅಮೃತಾ ಹೆಗಡೆ
( ದಿಕ್ಸೂಚಿ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

No comments:
Post a Comment