Wednesday, 23 February 2011

ಯಾರು ಜವಾಬ್ದಾರಿ ?

ಓ ದೇವರೇ ...... ಅವಳೇಕೆ ಈ ನಿರ್ಧಾರಕ್ಕೆ ಬಂದಳು ?  ಆವೇಶದ ನಿರ್ಧಾರವಲ್ಲವೇ ಇದು ?   
ಮುಗಿದು ಹೋಗಿರುವ ಆ ನಿರ್ಜೀವ ಭಾವನೆಗಳಿಗೇಕೆ ಅವಳು ಇನ್ನೂ ಹುಡುಕಾಟ ನಡೆಸುತ್ತಿದ್ದಳು ? ಎನ್ನುವ ಯೋಚನೆಯಲ್ಲಿದ್ದಾಳೆ ನಿಮಿ. ಯಾವುದೋ ಘಾಡವಾದ  ಚಿಂತೆಯಲ್ಲಿ ಮುಳುಗಿರುವ ನಿಮಿಯನ್ನು ಅಲುಗಾಡಿಸಿ ಎಚ್ಚರಿಸಿದಳು ಮೀನಾ. ಮೌನವಾಗಿ ನಿಮಿಯ ಕಂಗಳಲ್ಲಿ ನೀರು ತುಂಬುತ್ತಿರುವುದನ್ನು ಮೀನಾ ಗಮನಿಸುತ್ತಿದ್ದಳು.    
ಮೀನಾಳ ಮುಖದಲ್ಲಿದ್ದ ಪ್ರಶ್ನಾರ್ಥಕ ಚಿನ್ನೆಗೆ ಸಂಜ್ನೆಯ ಮೂಲಕವೇ ಇದನ್ನು ಓದು ಎಂಬ ಸೂಚನೆ ನಿಮಿಯಿಂದ ರವಾನೆಯಾಗಿತ್ತು. ಕುತೂಹಲದಿಂದಲೇ ಅವಳು ಕೊಟ್ಟ ಪತ್ರಿಕೆ ಕೈಗೆತ್ತುಕೊಂಡಳು ಮೀನಾ. ಅವಳು ಓದಿದ್ದ ವರದಿ ನಿಮಿ-ಮೀನಾರ ಜೀವದ ಗೆಳತಿಯ ಬದುಕು. ಪ್ರತಿ ಅಲ್ಲಿ ಬಂದ ಒರದಿ ಓದಿ ಮೀನಾ ಕೂಡ ಆಘಾತದಲ್ಲಿ ಮುಳುಗಿ ಹೋದಳು. ಅಲ್ಲಿ ಪ್ರಕಟಗೊಂಡ ಸುದ್ದಿಯಲ್ಲಿದ್ದ  ಎಲ್ಲವೂ ಇವರಿಬ್ಬರಿಗೂ ತಿಳಿದಿತ್ತು. ಆದರೆ ಅವಳ ಜೀವನ ಇಷ್ಟುಬೇಗ, ಇಂಥಹ ಕ್ಷುಲ್ಲಕ ಕಾರಣಕ್ಕಾಗಿ ಕೊನೆಯಾಗುತ್ತದೆ ಎಂಬ ವಿಷಯ ಅನಿರೀಕ್ಷತವಾಗಿತ್ತು. ಕಳೆದುಕೊಂಡ ಪ್ರೀತಿಗಾಗಿ ಕೊರಗುತ್ತಿದ್ದ ಅವಳನ್ನು ಸಮಾಧಾನ ಪಡಿಸಿದ್ದೆ ಎಂದು ನಂಬಿದ್ದ ಗೆಳತಿಯರಿಗೆ ಅತೀವ ಆಘಾತವಾಗಿತ್ತು. ಇಬ್ಬರಲ್ಲಿಯೂ ಮಾತು ನಿಂತು ಹೋಗಿತ್ತು. ಉಕ್ಕಿ ಉಕ್ಕಿ ಬರುತ್ತಿರುವ ದುಖಃ ನಿಯಂತ್ರಣ ತಪ್ಪುವಂತಿತ್ತು. ಜೀವದ ಗೆಳತಿಯ ಸಾವಿನ ಸುದ್ದಿ ಪತ್ರಿಕೆಯಿಂದ ತಿಳಿಯ ಬೇಕೇ?
ಅವಳು ಮನನೊಂದು ಕೂತಿದ್ದಾಗ ನಾನೇ ಸಮಾಧಾನ ಮಾಡಿದ್ದೆ ಕಣೇ........ ಅವಳು ನನ್ನ ಗಟ್ಟಿಯಾಗಿ ತಬ್ಬಿ ಅತ್ತಿದ್ದಳು. ಊಟಮಾಡದೇ ಕುಳಿತಿದ್ದಾಗ ನಾವೇ ಊಟ ಮಾಡಿಸಿದ್ವಲ್ಲೇ...... ಅನ್ನೋ ನಿಮಿಯ ದುಖಃ ನೋಡಿ ಮೀನಾ ಮೂಕಳಾದಳು.  ಮೀನಾ....  ಅದೇ ಕೊನೆ ಕಣೇ........ ಆಮೇಲೆ ಮರುದಿನವೇ ಊರಿಗೆ ಹೊರಟು ಹೋದಳು. ನಾನು ಫೋನ್ ಮಾಡಿದ್ರೂ ಮಾತೇ ಆಡಿರಲಿಲ್ಲ…    ನಿಮಿಯನ್ನು ಸಮಾಧಾನ ಪಡಿಸಲು ಕಷ್ಟಪಡುತ್ತಿದ್ದ ಮೀನಾ ಕೂಡ ಅಳುತ್ತಿದ್ದಳು.
ಪತ್ರಿಕೆ ಯಲ್ಲಿ ಬಂದ ಆತ್ಮಹತ್ಯೆ ಸುದ್ದಿಯ ನಾಯಕಿಯೇ  ಪೀಯುಶಾ. ಪ್ರೀತಿಯಲ್ಲಿ ನೊಂದಿದ್ದ ಹುಡುಗಿ ಇವಳು.  .ಜೀವಕ್ಕಿಂತ ಹೆಚ್ಚು  ಪ್ರೀತಿಸುತ್ತಿದ್ದ ಗಗನ್ ತನ್ನನ್ನು ಎಂದಿಗೂ ದೂರಮಾಡುವುದಿಲ್ಲ ಎಂಬ ಅವಳ ನಂಬಿಕೆ ಹುಸಿಯಾಗಿತ್ತು. ಯಾವುದೋ ಕಾರಣಕ್ಕೆ,ಮತ್ಯಾರದೋ ಹಿತಕ್ಕೋಸ್ಕರ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತೇನೆ ಎಂದು ಹೇಳಿ ಅವಳನ್ನು ದೂರ ಮಾಡಿದ್ದ ಆ ಹುಡುಗ. ಇದಾದ ನಂತರ  ದೂರದ ಹಳ್ಳಿಯಲ್ಲಿದ್ದ ತನ್ನೂರಿಗೆ ಹೊರಟು ಹೋಗಿದ್ದಳು. ಈಗ ಜನ್ಮಕೊಟ್ಟವರನ್ನು ಅನಾಥರನ್ನಾಗಿ ಮಾಡಿ ಹೊರಟೇ ಹೋಗಿದ್ದಾಳೆ ಪೀಯುಶಾ. ಪ್ರೀತಿಯಲ್ಲಿ ಸೋತ ಕಾರಣಕ್ಕೆ ಜೀವನವೇ ಬೇಡ ಎಂಬ ನಿರ್ಧಾರ ತೆಗೆದುಕೊಂಡಿದ್ದಳು.
ನಿಮಿ-ಮೀನಾ ಅದೆಷ್ಟೋ ಹೊತ್ತು ಅಳುತ್ತಾ ಕೂತಿದ್ದರು. ಈಗ ಮೌನವಾಗಿಯೇ  ಇರುವ ಅವರಿಬ್ಬರಲ್ಲಿ ಸಾವಿರಾರು ಪ್ರಶ್ನೆಗಳು ಎದ್ದು ಎದ್ದು ... ಅವರ ಮನಸ್ಸನ್ನು ಗುದ್ದುತ್ತಿವೆ.
ಅವಳಲ್ಲಿ ತಾನಾಗಿಯೇ ಹುಟ್ಟಿದ ಆ ಮೃದು ಭಾವನೆ ಬೆಳೆದು ಮರವಾಗಿತ್ತು . ಆ ಮರವನ್ನು ಬುಡ ಸಮೇತ ಕತ್ತರಿಸಿ ಬೀಸಾಡಿದ ಅವನ ನಡುವಳಿಕೆ ಸರಿಯೇ? ಕತ್ತರಿಸುವಾಗ ಸ್ವಲ್ಪವೂ ಕನಿಕರ ಹುಟ್ಟಿಲ್ಲವೇ ? ಆತ್ಮಸಾಕ್ಷಿ ಮಾತನಾಡಲಿಲ್ಲವೇ ?ಅವನ ಸಂಪೂರ್ಣ ನಂಬಿದ ಅವಳ ನಿಶ್ಕಲ್ಮಶ ಮನಸ್ಸಿಗೆ ದ್ರೋಹ ಮಾಡುತ್ತಿರುವಾಗ ಪಾಪ ಪ್ರಜ್ನೆಯೂ ಕಾಡಲಿಲ್ಲವೇ ?
ಪ್ರೀತಿ ಇಷ್ಟೊಂದು ಕ್ರೂರವೇ ? ಸಿಗದ ಪ್ರೀತಿಗಾಗಿ ಜೀವ ಬಿಡುವುದೇ? ಬರೀ ಪ್ರೀತಿಯೊಂದೇ ಜೀವನವೇ? ಎಲ್ಲವೂ ತಿಳಿದಿರುವ ಬುದ್ಧಿವಂತ ಹುಡುಗಿಗೆ ವಾಸ್ತವವೇಕೆ ಅರ್ಥವಾಗಿಲ್ಲ? ಒಂದೇ ಒಂದು ಬಾರಿಯೂ ತನ್ನ ಅಪ್ಪ-ಅಮ್ಮ ರ ಬಗ್ಗೆ ಯೋಚಿಸಲೇ ಇಲ್ಲವೇ ?  ಅವಳ ಹೆತ್ತ ಕರುಳ ದುಖಃಕ್ಕೆ  ಯಾರು ಹೊಣೆ ? ಮಗಳ ಕಳೆದುಕೊಂಡ ತಂದೆ- ತಾಯಿಯರ ಬದುಕು ನೆಮ್ಮದಿಯೇ ಇಲ್ಲದ ಬದುಕಾಗಿ ಬಿಟ್ಟಿದೆಯಲ್ಲ...  ಇದಕ್ಕೆ ಯಾರು ಜವಾಬ್ದಾರಿ ?


2 comments:

  1. howdu awalu vaastawawannu yaake artha madkondilla?

    ReplyDelete
  2. mast bardyale........ houde adu bari dod tapp madigidu.. javabdari adeya. entake andre preeti madid ade alda?

    ReplyDelete

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...