Friday, 27 July 2012

ವರವ ಕರುಣಿಸು ತಾಯಿ... ವರ ಮಹಾಲಕ್ಷ್ಮಿ


ಶುಭ ಶ್ರಾವಣ ಮಾಸದ ಎರಡನೇ ಶುಕ್ರವಾರವಾದ ಇಂದು ವರ ಮಹಾಲಕ್ಷ್ಮಿ ಹಬ್ಬ..ದಕ್ಷಿಣ ಭಾರತದ ಪ್ರಮುಖವಾದ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬವೂ ಒಂದು. ಸಕಲ ಐಶ್ವರ್ಯವನ್ನೂ ಕರುಣಿಸುವ ಮಹಾಲಕ್ಷ್ಮಿಗೆ ಮನೆಮನೆಯಲ್ಲಿ ಸಂಭ್ರಮದ ಪೂಜೆ ನಡೆಯುತ್ತೆ. ಎಲ್ಲೆಲ್ಲೂ ಸುಖ, ಸಂಪತ್ತು, ಸಮೃದ್ಧಿಯನ್ನು ಕರುಣಿಸೋ ಭಾಗ್ಯದಾತೆಯ ಆರಾಧನೆ ನಡೆಯುತ್ತೆ.. ಶ್ರೀ ಮಹಾವಿಷ್ಣುವಿನ ಪತ್ನಿ ವರ ಮಹಾಲಕ್ಷ್ಮಿಯನ್ನು ಪೂಜಿಸಿದ್ರೆ, ಸಕಲ ಸೌಭಾಗ್ಯವೂ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. 

ತಳಿರು ತೋರಣಗಳಿಂದ ಶೃಂಗಾರಗೊಂಡ ಮನೆಗಳಲ್ಲಿ ಭಕ್ತಿಭಾವದಿಂದ ಮಹಾಲಕ್ಷ್ಮಿಯನ್ನು ಸ್ವಾಗತಿಸಲಾಗುತ್ತಿದೆ.  ಸುಂದರ ಮಂಟಪ ಸಿದ್ಧಪಡಿಸಿ, ಲಕ್ಷ್ಮಿ ಮೂರ್ತಿಯನ್ನು ಕುಳ್ಳರಿಸಿ, ಒಪ್ಪಾದ ಸೀರೆಯುಡಿಸಿ, ಹೂವು ಆಭರಣಗಳಿಂದ ದೇವಿಯನ್ನು ಶೃಂಗರಿಸಿ.. ಮಹಾಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಲಾಗುತ್ತೆ. ಸುಮಂಗಲಿಯರಿಗೆ ಅರಶಿನ ಕುಂಕುಮ ನೀಡಿ ಮಹಾಲಕ್ಷ್ಮಿಯನ್ನು ಆರಾಧಿಸಲಾಗುತ್ತೆ.. ವಿವಿಧ ಸಿಹಿ ತಿಂಡಿಗಳನ್ನು ತಯಾರಿಸಿ ವರ ಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮಿಸಲಾಗುತ್ತೆ... ಭಕ್ತಿ ಭಾವದ ವರಲಕ್ಷ್ಮಿ ಹಬ್ಬ ಮನೆ ಮನಗಳಲ್ಲಿ ಹರ್ಷ ತುಂಬುತ್ತದೆ..

ದೀರ್ಘ ಮಾಂಗಲ್ಯ ಭಾಗ್ಯವನ್ನು ಮತ್ತು ಕುಟುಂಬಕ್ಕಾಗಿ ಸುಖ, ಸಮೃದ್ಧಿ, ಸಂಪತ್ತನ್ನು, ಕೋರುವ ಸುಮಂಗಲೆಯರು, ಪುರೋಹಿತರ ಅಗತ್ಯವಿಲ್ಲದೆ ಮಾಡಬಹುದಾದ ವ್ರತವಿದು.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತಿನ ಅಧಿಪತಿಯಾದ ಶುಕ್ರ ಗ್ರಹದ ವಾರದಲ್ಲಿಯೇ ಈ ವ್ರತಾಚರಣೆ ನಡೆಯುವುದರಿಂದ ಈ ವೃತ ಅತ್ಯಂತ ಶ್ರೇಷ್ಠವಂತೆ.

ಸಾಮಾನ್ಯವಾಗಿ ನಗರ ಜನತೆ ಮಾತ್ರ ಆಚರಿಸಿ ಸಂಭ್ರಮಿಸುವ ಹಬ್ಬ ವರಮಹಾಲಕ್ಷ್ಮಿ ಹಬ್ಬ.
ಈ ಹಬ್ಬಕ್ಕೆ ಜಾತಿ ಬೇಧವಿಲ್ಲ.. ಸಮೃದ್ಧಿ, ಸೌಖ್ಯವನ್ನು ಬಯಸಿ ಎಲ್ಲರೂ ಈ ವೃತವನ್ನು ಮಾಡಬಹುದು..  ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಚರಿಸಿಲ್ಪಡುವ ಪ್ರಮುಖ ಹಬ್ಬಗಳಲ್ಲಿ ವರ ಮಹಾಲಕ್ಷ್ಮಿ ಹಬ್ಬವೂ ಒಂದು..ಈ ವೃತ  ಇತ್ತೀಚಿನ ದಿನಗಳಲ್ಲಿ ಸಾರ್ವತ್ರಿಕ ಆಚರಣೆಯಾಗಿ ಬದಲಾಗುತ್ತಿರುವುದೂ ಕೂಡ ಒಂದು ಒಳ್ಳೆಯ ಬೆಳವಣಿಗೆ ಅನ್ನೋದು ಹಲವರ ಅಭಿಪ್ರಾಯ. 


ಭಾಗ್ಯದಾತೆ ವರಮಹಾಲಕ್ಷ್ಮಿಯ ಕೃಪೆಯಿಂದ ಎಲ್ಲೆಡೆಯೂ ಸಂಪತ್ತು ನೆಲೆಸಲಿ ಅನ್ನೋದು ಎಲ್ಲರ ಹಾರೈಕೆ.. ಎಲ್ಲರಿಗೂ ವರ ಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.

No comments:

Post a Comment

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...