Saturday, 28 July 2012

ಇಂದು ವಿಶ್ವ ಹ್ಯಾಪಟೈಟಿಸ್‌ ದಿನ

ಮಾನವ ಸಂಕುಲಕ್ಕೆ ಕಾಡುತ್ತಿರುವ ಮಹಾ ರೋಗಗಳಲ್ಲಿ 'ಹ್ಯಾಪಟೈಟಸ್‌ ಬಿ' ಮತ್ತು 'ಹ್ಯಾಪಿಟೈಟಸ್‌ ಸಿ' ಕೂಡ ಪ್ರಮುಖವಾದವುಗಳು. ಜಗತ್ತಿನ ಜನರನ್ನು ಕಾಡಿದ ಈ ಮಾರಕ ರೋಗದ ಕುರಿತು ಜಾಗತಿಕ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸಂಸ್ಥೆ ಹ್ಯಾಪಿಟೈಟಸ್‌ ದಿನವನ್ನು ಘೋಷಿಸಿದೆ. ಅಂತರಾಷ್ಟ್ರೀಯ ಹ್ಯಾಪಿಟೈಟಸ್‌ ದಿನವಾದ ಇಂದು ವಿಶ್ವದಾದ್ಯಂತ ಹ್ಯಾಪಿಟೈಟಸ್‌ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.  

ಜಗತ್ತಿನಲ್ಲಿ ಸರಿಸುಮಾರು 500 ಮಿಲಿಯನ್‌ ಜನ್ರು ಹ್ಯಾಪಿಟೈಟಸ್‌ ಬಿ ಮತ್ತು ಹ್ಯಾಪಿಟೈಟಸ್‌ ಸಿ ರೋಗದಿಂದ ಬಳಲುತ್ತಿದ್ದಾರೆ.. ಇದೇ ರೋಗಗಳ ಕಾರಣದಿಂದ ಒಂದು ಮಿಲಿಯನ್‌ಗೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಇಂತಹ ಮಾರಕ ರೋಗಗಳಿಂದ ಜಗತ್ತನ್ನು ಕಾಪಾಡುವ ದೃಷ್ಠಿಯಿಂದ ವಿಶ್ವಸಂಸ್ಥೆ ಜುಲೈ 28ನ್ನು ವಿಶ್ವ ಹ್ಯಾಪಿಟೈಟಸ್‌ ದಿನವನ್ನಾಗಿ ಘೋಷಿಸಿತು.

2004
ರಲ್ಲಿ ಯೂರೋಪಿಯನ್ ರಾಷ್ಟ್ರಗಳು ಮತ್ತು ಮಧ್ಯ ಪೂರ್ವ ದೇಶಗಳ ಹ್ಯಾಪಿಟೈಟಸ್‌ ಬಾಧಿತರ ಗುಂಫು, ಈ ಮಾರಕ ರೋಗದ ಕುರಿತು ಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸಿತು. 2007ರಲ್ಲಿ ವರ್ಲ್ಡ್ ಹ್ಯಾಪಿಟೈಟಸ್‌ ಅಲಿಯನ್ಸ್‌ ಜಗತ್ತಿನಾದ್ಯಂತ ಹ್ಯಾಪಿಟೈಟಸ್‌ ಬಿ ಮತ್ತು ಸಿ ರೋಗದಿಂದ ಬಳಲುತ್ತಿರುವ ರೋಗಿಗಳ ಸರ್ವೆ ಮಾಡಿ, ಜಾಗೃತಿ ಕಾರ್ಯಕ್ರಮ ಕೈಗೊಂಡ್ತು. ನಂತರ ವಿಶ್ವ ಸಂಸ್ಥೆ ಈ ರೋಗವನ್ನು ಗಂಭೀರವಾಗಿ ಪರಿಗಣಿಸಿ, ಜಗತ್ತಿಗೆ ಜಾಗೃತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡ್ತು.. 2008ರ ಜುಲೈ 28ರಂದು ಮೊದಲ ವಿಶ್ವ ಹ್ಯಾಪಿಟೈಟಸ್‌ ದಿನವನ್ನು ಆಚರಿಸಲಾಯ್ತು.

ಯಕೃತ್ತಿನ ಸೋಂಕು ಮತ್ತು ಉರಿಯೂತ ಹ್ಯಾಪಿಟೈಟಸ್‌ ಬಿ ರೋಗದ ಲಕ್ಷಣ.. ಯಕೃತ್ತು ಸಂಬಂಧಿ ರೋಗವಾದ್ದರಿಂದ ತೀವ್ರ ವಾಂತಿ ಬೇಧಿ ಕಾಣಿಸಿಕೊಂಡು ರೋಗಿಯ ಪ್ರಾಣಕ್ಕೇ ಕುತ್ತು ತರುವ ಅಪಾಯಕಾರಿ ವೈರಸ್‌ ಇದು.. ಜಾಗತಿಕ ಅಪಾಯ ತಂದೊಡ್ಡಿರುವ ಹ್ಯಾಪಿಟೈಟಸ್‌ ಎ,ಬಿ, ಸಿ ಮತ್ತು ಡಿ ಸೋಂಕಿನ ನಿವಾರಣೆಗಾಗಿ ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಜಾಗೃತಿ ಮೂಡಿಸುತ್ತಿದೆ.. ಸದಸ್ಯರಾಷ್ಟ್ರಗಳಿಗೆ ಈ ರೋಗದ ಅಪಾಯದ ಕುರಿತು, ಮುಂಜಾಗೃತೆ ಮತ್ತು ನಿವಾರಣೆಯ ಕುರಿತು ಮಾಹಿತಿ ಬಿತ್ತುವ ಕೆಲಸ ಮಾಡುತ್ತಿದೆ.  ಹ್ಯಾಪಿಟೈಟಸ್‌ ಸೋಂಕು ಮುಕ್ತ ಜಗತ್ತಿನ ನಿರ್ಮಾಣಕ್ಕಾಗಿ ವಿಶ್ವ ಸಂಸ್ಥೆ ಪಣ ತೊಟ್ಟಿದೆ...

No comments:

Post a Comment

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...