ಯುವ
ಮನಸ್ಸುಗಳಿಗೆ ಇಂದು ಹಬ್ಬ. ಸುಮಧುರ ಸಂಬಂಧವಾದ 'ಸ್ನೇಹ'ಕ್ಕೆ
ಗೌರವ ನೀಡುವ ದಿನ ಇವತ್ತು. ಜೀವನದಲ್ಲಿ
ಅತೀ ಮುಖ್ಯ ಪಾತ್ರವಹಿಸೋ ಗೆಳೆಯರನ್ನು ನೆನಪಿಸಿಕೊಂಡು,
ಪರಸ್ಪರ
ಶುಭಾಷಯಗಳನ್ನು ವಿನಿಮಯ ಮಾಡಿಕೊಂಡು.. ಗೆಳೆತನದ ಆನಂದವನ್ನು
ಅನುಭವಿಸುವ ದಿನವೇ 'ವಿಶ್ವ ಗೆಳೆಯರ
ದಿನ'...
|
|
ಮನಸ್ಸು ಮನಸ್ಸುಗಳ ಬಾಂಧವ್ಯವೇ ಗೆಳೆತನ. ನಮ್ಮ ನಗುವಿಗೆ, ಕಣ್ಣೀರಿಗೆ ಸಾಥಿಯಾಗಿ ನಮ್ಮೊಂದಿಗೆ ಬೆರೆಯುವ ಆ ಮತ್ತೊಂದು ಮನಸ್ಸೇ ಸ್ನೇಹದ ರೂಪ. ಆ ಮನಸ್ಸಿನಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷವೇ ಗೆಳೆತನದ ಅಹ್ಲಾದಕ್ಕೆ ಸಾಕ್ಷಿ.. ಇಂತಹ ಗೆಳೆತನಕ್ಕೆ ಗೌರವ ಸಲ್ಲಿಸುವದಕ್ಕೋಸ್ಕರ ಆಗಷ್ಟ್ ತಿಂಗಳ ಮೊದಲ ಭಾನುವಾರವನ್ನು ಫ್ರೆಂಡ್‌ಶಿಪ್ ಡೇ ಆಗಿ ಆಚರಿಸಲಾಗುತ್ತಿದೆ. ಉತ್ತರ ಅಮೇರಿಕಾದ ರಾಷ್ಟ್ರಗಳು 1919 ರಿಂದಲೇ ಸ್ನೇಹಿತರ ದಿನವನ್ನು ಆಚರಿಸುತ್ತಾ ಬಂದಿವೆ.. 1958ರಲ್ಲಿ ವಿಶ್ವ ಸಂಸ್ಥೆ ವಿಶ್ವಕ್ಕೆ ಸ್ನೇಹಿತರ ದಿನ ಪರಿಚಯ ಮಾಡ್ತು. ಜುಲೈ 30ರ ದಿನವನ್ನು ವಿಶ್ವ ಸ್ನೇಹಿತರ ದಿನವನ್ನಾಗಿ ಘೋಷಿಸಿತು..ನಂತರ ದಕ್ಷಿಣ ಏಷ್ಯಾದ ರಾಷ್ಟ್ರಗಳು ಈ ದಿನದ ಆಚರಣೆಯನ್ನು ಸ್ವೀಕರಿಸಿದ್ವು.. ಆದ್ರೆ, ಅರ್ಜಂಟೈನಾ ಮತ್ತು ಬ್ರೆಸಿಲ್‌ಗಳಲ್ಲಿ ಜುಲೈ 20ಕ್ಕೆ ಸ್ನೇಹಿತರ ದಿನವನ್ನು ಆಚರಿಸಲಾಗುತ್ತೆ.. ಹಾಗೇ ಉರುಗ್ವೆ ಸೇರಿದಂತೆ ಕೆಲವು ದೇಶಗಳಲ್ಲಿ ಜುಲೈ 30ರಂದು ಆಚರಿಸ್ತಾರೆ. ಭಾರತ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಷ್ಟ್ ತಿಂಗಳ ಮೊದಲ ಭಾನುವಾರ ಆಚರಿಸಲಾಗುತ್ತದೆ... ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಉಡುಗೊರೆ ನೀಡಿ.. ಪರಸ್ಪರ ಸ್ನೇಹಿತರೆಲ್ಲ ಸಂತಸಪುಡವ ದಿನ ಇವತ್ತು. ಗೆಳೆತನದ ಖುಷಿಯನ್ನು ಸವಿಯುವ ಯುವ ಮನಸ್ಸುಗಳಿಗೆ ಈ ಫ್ರೆಂಡ್‌ಶಿಪ್ ಡೇ ಅಂದ್ರೆ, ಅದೇನೋ ಉತ್ಸಾಹ.. ನಮ್ಮ ದೇಶದಲ್ಲಿ ಫ್ರೆಂಡ್‌ಶಿಪ್ ಬ್ಯಾಂಡ್‌ನ್ನು ಗೆಳೆಯರ ಕೈಗೆ ಕಟ್ಟಿ ಸಂತಸ ಪಡುವ ಸಂಸ್ಕೃತಿ ಇದೆ.. ಪುಟ್ಟ ಮಗುವಿಗೆ ಪ್ರಪಂಚದ ಅರಿವು ಮೂಡುತ್ತಿದ್ದಂತೇ ಅದು ಗೆಳೆಯರ ಹುಡುಕಾಟ ಪ್ರಾರಂಭ ಮಾಡುತ್ತೆ.. ತನ್ನ ಭಾವನೆಗಳಿಗೆ, ಯೋಚನೆಗಳಿಗೆ ಸರಿಹೊಂದುವ ಮತ್ತೊಂದು ಮನಸ್ಸಿಗಾಗಿ ಹವಣಿಸುತ್ತೆ.. ಹೀಗೆ ಚಿಕ್ಕಂದಿನಿಂದಲೇ ಗೆಳೆತನದ ಅವಶ್ಯಕತೆ, ಅನಿವಾರ್ಯತೆಯ ಅರಿವಾಗುತ್ತೆ ಅದಕ್ಕೆ.. ಈ ಗೆಳೆತನಕ್ಕೆ ವಯಸ್ಸಿನ ಮಿತಿಯಿಲ್ಲ..ಈ ಸ್ನೇಹ ಅನ್ನೋದು ಸಮಾನ ಮನಸ್ಕರ ನಡುವೆ ಬೆಳೆಯುವಂತಹ ಆತ್ಮೀಯತೆ. ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರೂ ತಮ್ಮದೇ ಒಂದು ಸ್ನೇಹ ಪ್ರಪಂಚವನ್ನು ಹೊಂದಿರ್ತಾರೆ.. ಸ್ನೇಹದ ಭಾವದಿಂದ್ಲೇ ಯಾವುದೋ ನೆಮ್ಮದಿ ಪಡೆಯುತ್ತಾರೆ. ಅಂತಹ ಸ್ನೇಹಕ್ಕೊಂದು ಹ್ಯಾಟ್ಸಾಫ್ ಹೇಳೋಣ ಅಲ್ವಾ...? ಎಲ್ರಿಗೂ ವಿಶ್ವ ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು.. |
No comments:
Post a Comment