Sunday, 12 August 2012

ಅಂತರಾಷ್ಟ್ರೀಯ ಯುವ ದಿನ


ಇವತ್ತು ಅಂತರಾಷ್ಟ್ರೀಯ ಯುವ ದಿನ.. ಉತ್ಸಾಹದ ಬುಗ್ಗೆಯಂತಿರುವ ಯುವ ಮನಸ್ಸುಳು.... ಯಾವುದನ್ನೇ ಆದ್ರೂ ಸಾಧಿಸಿ ತೋರಿಸುವ ಛಲ ಹೊತ್ತಿರುವ ಯವ ಸಮೂಹ..., ಹೊಸ ಹೊಸ ಸವಾಲುಗಳನ್ನು ಜಯಿಸುವ ಆತ್ಮವಿಶ್ವಾಸದಲ್ಲಿರುವ ಯುವ ಜನತೆಯಿಂದ ಎಲ್ಲಾ ದೇಶಗಳ ಅಭಿವೃದ್ಧಿ ಸಾಧ್ಯ..  ಪ್ರತಿಯೊಂದು ದೇಶಕ್ಕೂ ಶಕ್ತಿ ಮತ್ತು ಉಜ್ವಲ ಭವಿಷ್ಯ ನೀಡಲು ಆ ದೇಶದ ಯುವ ಜನತೆಯಿಂದಷ್ಟೇ ಸಾಧ್ಯ. ಅಭಿವೃದ್ಧಿಯತ್ತ ಸಾಗುತ್ತಿರುವ ಯುವ ಪ್ರಜೆಗಳಿಂದ ಮಾತ್ರ ದೇಶ ತನ್ನ ಔನತ್ಯದ ಕನಸು ಕಾಣಲು ಸಾಧ್ಯ..ಇಂತಹ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿಶ್ವ ಸಂಸ್ಥೆ ಅಂತರಾಷ್ಟ್ರೀಯ ಯುವ ದಿನವನ್ನು ಘೋಷಿಸಿದೆ.. 

ಯೂತ್‌ ಅನ್ನೋ ಪದವೇ ಉತ್ಸಾಹಕ್ಕೆ ಸರಿಸಮಾನವಾಗಿದೆ.. ಹರ್ಷ, ಛಲ, ಶಕ್ತಿಯನ್ನು ಸಂಕೇತಿಸುವ ಪದ ಇದು. ಎಲ್ಲಾ ರಾಷ್ಟ್ರಗಳ ಭವ್ಯ ಭವಿಷ್ಯ ನಿರ್ಧಾರವಾಗುವುದು ಕೂಡ ಆಯಾ ದೇಶಗಳ ಯುವ
ಜನಾಂಗದ ಮೇಲೆಯೇ... ಇದೇ ಕಾರಣಕ್ಕೇ ಯುವ ಜನಾಂಗವನ್ನು ಯುವ ಶಕ್ತಿ ಎಂದು
ಕರೆಯಲಾಗುತ್ತೆ...

ಪ್ರತಿ ದೇಶದ ಭವಿತವ್ಯದ ಕನಸುಗಳಾಗಿರುವ ಯುವ ಸಮೂಹಕ್ಕೆ ಅಭಿವೃದ್ದಿಯ ಜಾಗೃತೆ ಮೂಡಿಸುವ ನಿರ್ಧಾರ ತೆಗೆದುಕೊಂಡ್ತು ವಿಶ್ವ ಸಂಸ್ಥೆ. 1999ರ ಡಿಸೆಂಬರ್‌ 17ರಂದು ಯುವಕರಿಗಾಗಿಯೇ ಒಂದು ದಿನವನ್ನು ಮೀಸಲಿಡವುದಾಗಿ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿತ್ತು. ವಿಶ್ವ ಸಂಸ್ಥೆಯ ಘೋಷಣೆಯ ಪ್ರಕಾರ, 2000 ಇಸವಿಯಿಂದ ಪ್ರತಿ ವರ್ಷದ ಆಗಷ್ಟ್‌‌ 12ರಂದು 'ವಿಶ್ವ ಯುವ ದಿನ'ವನ್ನು ಆಚರಿಸಲಾಗುತ್ತಿದೆ.

ನಿರುದ್ಯೋಗ, ಅಸಮರ್ಪಕ ಮಾಹಿತಿಯ ಸಂಗ್ರಹ, ನೈಪುಣ್ಯತೆಯ ಕೊರತೆ, ಸಮರ್ಪಕ ನಿರ್ಧಾರದ ಕೊರತೆ, ಮುಂತಾದ ಸಮಸ್ಯೆಯಿಂದ ಬಳಲುತ್ತಿರುವ ಅನೇಕ ದೇಶಗಳ ಯುವ ಜನತೆಯಲ್ಲಿ ಜಾಗೃತಿಯ ಬೀಜ ಬಿತ್ತುವ ಕಾರ್ಯವನ್ನು ವಿಶ್ವ ಸಂಸ್ಥೆ ಮಾಡುತ್ತಿದೆ.. ಯುವ ಜನತೆ ಅನುಭವಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಮತ್ತು ಸರ್ಕಾರದಿಂದ ಯುವ ಸಮೂಹಕ್ಕೆ ಸಿಗಲೇ ಬೇಕಾದ ಸವಲತ್ತುಗಳ ಬಗ್ಗೆ ಬೇಡಿಕೆ ಸಲ್ಲಿಸುವ ಕಾರ್ಯವನ್ನು ವಿಶ್ವ ಸಂಸ್ಥೆ ಕೈಗೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ, ಲೇಖನಗಳ ಮೂಲಕ, ಚರ್ಚೆಗಳ ಮೂಲಕ ಯುವಕರಲ್ಲಿ ಸಾಧನೆಯ ಬೀಜವನ್ನು ಬಿತ್ತುವ ಕಾರ್ಯವನ್ನು ಸದಸ್ಯ ರಾಷ್ಟ್ರಗಳಲ್ಲಿ ಕೈಗೊಳ್ಳಲಾಗುತ್ತೆ.


'
ಯುವ ಶಕ್ತಿಯಿಂದಲೇ ಯಶಸ್ವಿ ಜಗತ್ತಿನ ನಿರ್ಮಾಣ ಸಾಧ್ಯ' ಅನ್ನೋದು ಈ ವರ್ಷದ 'ವಿಶ್ವ ಯುವ
ದಿನದ ಸಂದೇಶ. ಯುವ ಜನಾಂಗದ ಏಳಿಗೆಯೇ ಪ್ರತೀ ದೇಶದ ಏಳಿಗೆ. ಯುವ ಶಕ್ತಿ ಜಾಗೃತವಾದಾಗ ಮಾತ್ರ ಜಡ ಜಗತ್ತು ಬದಲಾಗಲು ಸಾಧ್ಯ.. ಶಕ್ತಿಯನ್ನು ಪ್ರತಿನಿಧಿಸುವ ಯುವ ಸಮೂಹ ಸಾಧನೆಯತ್ತ ಸಾಗಲಿ ಅನ್ನೋದು ಎಲ್ಲರ ಹಾರೈಕೆ.. ಎಲ್ಲರಿಗೂ ವಿಶ್ವ ಯುವ ದಿನದ ಶುಭಾಶಯಗಳು..


No comments:

Post a Comment

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...