ಇಂದು ನಾಡಿನೆಲ್ಲಡೆ
ಗೌರಿ ಹಬ್ಬದ ಸಂಭ್ರಮ. ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಇದು. ಶಿವನ ಅರಸಿ ಗೌರಿ, ತವರಿಗೆ ಬರುವ ದಿನ ಇವತ್ತು. ವರ್ಷಕ್ಕೊಮ್ಮೆ ಮಾತ್ರ ತವರಿಗೆ
ಬರುವ ಗೌರಮ್ಮಗೆ
ಇಂದು , ನಾರಿಯರೆಲ್ಲ ಸೇರಿ ಸಂಭ್ರಮದ
ಸ್ವಾಗತ ಕೋರುತ್ತಾರೆ.. ಮನೆಯನ್ನೆಲ್ಲ ಸಿಂಗರಿಸಿ, ಹೊಸ ಬಟ್ಟೆ
ತೊಟ್ಟು, ಗೌರಿಗೆ ಇಷ್ಟವಾದ ಸಿಹಿ
ತಿಂಡಿಗಳನ್ನು ಮಾಡಿ..ಗೌರಿಯನ್ನು
ಮನೆತುಂಬಿಸಿಕೊಳ್ತಾರೆ. ಮಗ ಗಣೇಶನಿಗಿಂತ ಒಂದು ದಿನ ಮೊದಲು ಭಕ್ತರ ಮನೆಗೆ
ಬರುವ ಗೌರಮ್ಮ ಭಕ್ತರಿಂದ ಪೂಜೆ ಸ್ವೀಕರಿಸ್ತಾಳೆ.
ಭಾದ್ರಪದ, ಶುಕ್ಲದ ತದಿಗೆಯ ಶುಭವೇಳೆ ಮನೆಗೆ ಬಂದ ಗೌರಿಯನ್ನು, ಸುಂದರವಾಗಿ ಸಿಂಗರಿಸಿದ ಮಂಟಪದಲ್ಲಿ ಕುಳ್ಳಿರಿಸಿ ಪೂಜಿಸಲಾಗುತ್ತೆ. ತವರಿನೊಂದಿಗಿನ ಅವಿನಾಭಾವ ಸಂಬಂಧದ ಸಂಕೇತವಾಗಿರುವ ಗೌರಿ ಹಬ್ಬ ಬಂತೆಂದರೆ ಹೆಣ್ಣು ಮಕ್ಕಳಿಗೆ ಸುಗ್ಗಿ. ಮದುವೆಯಾದ ಹೆಣ್ಣುಮಕ್ಕಳಿಗೆ ತವರಿಗೆ ಹೋಗಿಬರಲು ಒಂದು ಸಂಭ್ರಮದ ಅವಕಾಶ. ಗೌರಿ ಹಬ್ಬದಲ್ಲಿ ಹೆತ್ತವರು ಅಥವಾ ಸೋದರ ಸಂಬಂಧಿಗಳು ಗೌರಿ ಸ್ವರೂಪಿ ಹೆಣ್ಣುಮಕ್ಕಳನ್ನು ಮನೆಗೆ ಕರೆದು ಉಡುಗೊರೆ ನೀಡಿ ನೂರ್ಕಾಲ ಬಾಳೆಂದು ಹಾರೈಸಿ, ಹಬ್ಬ ಆಚರಿಸುತ್ತಾರೆ.
ಮದುವೆಯಾದ ಹೆಣ್ಣುಮಕ್ಕಳು, ಇದೇ ದಿನ ವಿಶೇಷವಾಗಿ ತಾಯಿಗೆ ಬಾಗಿನ ನೀಡುವ ಸಂಪ್ರದಾಯವಿದೆ. ತಾಯಿ ಮನೆಗೆ ಬಂದು ಹಬ್ಬ ಆಚರಿಸೋಕೆ ಹೆಣ್ಣುಮಕ್ಕಳಿಗೂ ಅಷ್ಟೇ ಖುಷಿ.. ಗೌರಿ ಪೂಜೆಗೆ ಮನೆಗೆ ಆಗಮಿಸಿದ ಮುತ್ತೈದೆಯರಿಗೆ ಗೌರಿ ಬಾಗಿನ ನೀಡುತ್ತಾರೆ. ಹೂವು ,ವೀಳ್ಯದೆಲೆ,ಫಲ, ಅಕ್ಕಿ ಕಾಯಿ, ಅರಿಶಿಣ-ಕುಂಕುಮ, ಬಳೆ, ಸೀರೆ, ಶೃಂಗಾರ ಸಾಮಾಗ್ರಿಗಳನ್ನು, ಮೊರದಲ್ಲಿಟ್ಟು ಬಾಗಿನ ನೀಡಲಾಗುತ್ತೆ.
ತದಿಗೆ ದಿನ ಮನೆಗೆ ಬಂದ ಗೌರಿ, ಮಗ ಗಣೇಶನೊಂದಿಗೆ ಚೌತಿಯ ದಿನ ಪೂಜೆ ಸ್ವೀಕರಿಸಿ, ಪಂಚಮಿಯ ದಿನ, ಪುತ್ರನೊಂದಿಗೆ ಗಂಡನ ಮನೆಗೆ ತೆರಳುತ್ತಾಳೆ. ಮೂರು ದಿನ ತವರಿನಲ್ಲಿದ್ದ ಗೌರಿಯನ್ನು ಸಂಭ್ರಮದಿಂದಲೇ ಬೀಳ್ಕೊಡಲಾಗುತ್ತೆ. ಹಬ್ಬದ ಸಿಹಿತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ನೀರಿನಲ್ಲಿ ತೇಲಿಬಿಟ್ಟು ಗೌರಿಯನ್ನು ಗಂಡನ ಮನೆಗೆ ಕಳುಹಿಸಿಕೊಡಲಾಗುತ್ತೆ.
ಹೆಂಗಳೆಯರಲ್ಲಿ ಹರ್ಷ ಹೆಚ್ಚಿಸುವ, ತವರಿನ ಸುಮಧುರ ಬಾಂಧ್ಯವ್ಯದ ಸಂಕೇತವಾಗಿರುವ ಸಂಭ್ರಮದ ಹಬ್ಬ ಇದು. ಗೌರಿ ಹಬ್ಬ ಎಲ್ಲರಿಗೂ ಸಂತಸ ನೀಡಲಿ, ಮನೆಮನೆಯಲ್ಲಿ ಸಂಭ್ರಮ ತುಂಬಿರಲಿ ಅನ್ನುವ ಹಾರೈಕೆ ನಮ್ಮದು. ಎಲ್ಲರಿಗೂ ಗೌರಿಹಬ್ಬದ ಹಾರ್ದಿಕ ಶುಭಾಶಯಗಳು.

No comments:
Post a Comment