ಬಾಪೂಜಿ ಹುಟ್ಟಿದ ಈ ದಿನವನ್ನು
ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ‘ಮಹಾತ್ಮಾ ಗಾಂಧೀಜಿ’ ಎಂಬ ಹೆಸರು ಭಾರತೀಯರಿಗೆ
ಮಾತ್ರ ಪ್ರೇರಕ ಶಕ್ತಿ ಅಲ್ಲ...ಬದಲಾಗಿ ಇಡೀ ಜಗತ್ತಿಗೇ ಇದೊಂದು ಅಹಿಂಸಾ ತತ್ವ. ಅಹಿಂಸೆಯ ಮಂತ್ರ ಬೋಧಿಸಿದ
ಮಹಾನ್ ವ್ಯಕ್ತಿತ್ವ. 'ಮಹಾತ್ಮಾ ಗಾಂಧಿ' ಅನ್ನೋ ಮಹಾನ್ ವ್ಯಕ್ತಿತ್ವಕ್ಕೆ ಇಡೀ ಜಗತ್ತೇ ತಲೆಬಾಗುತ್ತೆ. ನಮ್ಮ ಬಾಪೂಜಿಯ ಹೆಸರೀಗ
ವಿಶ್ವಕ್ಕೆ 'ಅಹಿಂಸೆಯ ಧ್ಯೋತಕ. ಇದೇ ಕಾರಣಕ್ಕೆ ವಿಶ್ವಸಂಸ್ಥೆ ಅಕ್ಟೋಬರ್ 2 ನ್ನು ವಿಶ್ವ ಅಹಿಂಸಾ ದಿನವನ್ನಾಗಿ ಘೋಷಿಸಿದೆ.
ವಿಶ್ವ ಸಂಸ್ಥೆಯ
ಸಾಮಾನ್ಯ ಸಮಿತಿ, 2007ರಲ್ಲಿ ಗಾಂಧೀ
ಜಯಂತಿಯಂದು ವಿಶ್ವ ಅಹಿಂಸಾ ದಿನವನ್ನು ಆಚರಿಸುವ ನಿರ್ಧಾರವನ್ನು ಕೈಗೊಂಡಿತು. ದಿನದಿಂದ ದಿನಕ್ಕೆ
ಹೆಚ್ಚುತ್ತಿರುವ ಹಿಂಸೆ, ಕ್ರೌರ್ಯ, ರಕ್ತಪಾತಗಳನ್ನು ತಡೆಯಲು, ಗಾಂಧೀಜಿಯಂತಹ ಶಾಂತಿ ಧೂತರ
ತತ್ವಗಳನ್ನು ಜಗತ್ತಿಗೆ ಜ್ಞಾಪಿಸುವುದು ಅನಿವಾರ್ಯ ಅನ್ನೋದು ವಿಶ್ವ ಸಂಸ್ಥೆಯ ನಿಲುವು. ವಿಶ್ವದ ಶಾಂತಿಗಾಗಿ ಸದಾ ಪ್ರಯತ್ನಿಸುವ ವಿಶ್ವ ಸಂಸ್ಥೆ, ಅಹಿಂಸಾ ವಾದಿ ಗಾಂಧೀಜಿಯವರ ಹುಟ್ಟಿದ ದಿನವನ್ನೇ ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲು ನಿರ್ಧಾರ ಮಾಡ್ತು.
2007ರಲ್ಲಿಯೇ ಪ್ರಥಮ
ಬಾರಿಗೆ ಅಕ್ಟೋಬರ್
2 ರಂದು, ಅಂತರಾಷ್ಟ್ರೀಯ ಅಹಿಂಸಾ ದಿನವನ್ನು ಆಚರಿಸಲಾಯ್ತು.
ಸ್ವಾತಂತ್ರ್ಯ ಆಂದೋಲನದಲ್ಲಿ ನಿರಂತರ ಹೋರಾಟ ನಡೆಸಿ, ಭಾರತದಲ್ಲಿ ಸ್ವಾತಂತ್ರ್ಯ ಸೂರ್ಯ ಉದಯಿಸುವಂತೆ ಮಾಡಿದ ಗಾಂಧೀಜಿಯವರ ಅಹಿಂಸೆಯ ಶಾಂತಿ ಮಂತ್ರವನ್ನು ಜಗತ್ತಿಗೇ ಸಾರುವ ಕೆಲಸ ಮಾಡಲಾಗುತ್ತಿದೆ ವಿಶ್ವ ಸಂಸ್ಥೆ. ಸತ್ಯ, ನ್ಯಾಯ, ಧರ್ಮ, ನಿಷ್ಠೆಯ ಹಾಗೂ ಸರಳ ಜೀವನದಿಂದ ಗಮನ ಸೆಳೆದ ಈ ಮಹಾತ್ಮ ಹುಟ್ಟಿದ ದಿನವನ್ನು ಜಗತ್ತೇ ಜ್ಞಾಪಿಸಿಕೊಳ್ಳುತ್ತೆ.., ಗೌರವ ಸೂಚಿಸುತ್ತೆ..

No comments:
Post a Comment