ವಿಶ್ವದ ಮೊದಲ ಉಪಗ್ರಹ, ಸ್ಪುಟ್ನಿಕ್ ಗಗನಕ್ಕೆ ಉಡಾವಣೆಯಾದ ದಿನ ಇವತ್ತು. ಸೋವಿಯತ್ ಒಕ್ಕೂಟ ಗಗನಕ್ಕೆ
ಹಾರಿಬಿಟ್ಟ ಈ ಉಪಗ್ರಹ, ಬಾಹ್ಯಾಕಾಶ
ವಿಜ್ಞಾನದ ಮೈಲಿಗಲ್ಲು. ಸ್ಪುಟ್ನಿಕ್ ಸ್ಯಾಟಲೈಟ್ ಬಾಹ್ಯಾಕಾಶವನ್ನು ಚುಂಬಿಸಿ, ಇವತ್ತಿಗೆ 55 ವರ್ಷ.
ಆಗತಾನೇ ಎರಡನೇ ವಿಶ್ವ
ಯುದ್ಧ ಮುಗಿದ ಕಾಲಘಟ್ಟದಲ್ಲಿ.. ರಷ್ಯಾ ರಾಷ್ಟ್ರ ಸ್ಪುಟ್ನಿಕ್ ಉಪಗ್ರಹ ಸೃಷ್ಟಿಮಾಡ್ತು. ಆ ಸಮಯದಲ್ಲಿ ಅಮೆರಿಕಾ ಮತ್ತು ರಷ್ಯಾ ನಡುವೆ
ನಡೆಯುತ್ತಿದ್ದ ಶೀತಲ
ಸಮರದ ಫಲವಾಗಿ, ಆ ಎರಡು ದೇಶಗಳ ನಡುವೆ
ಸ್ಪರ್ಧೆ ಏರ್ಪಟ್ಟಿತ್ತು. ಮಿಲಿಟರಿ,ರಕ್ಷಣಾ
ವ್ಯವಸ್ಥೆ, ತಂತ್ರಜ್ಞಾನ, ವಿಜ್ಞಾನ ಹೀಗೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ
ಹುಟ್ಟಿಕೊಂಡಿತ್ತು. ಇದೇ ಸಂದರ್ಭದಲ್ಲಿ ವಿಜ್ಞಾನದಲ್ಲಿ ತಮ್ಮ ಸಾಧನೆಯನ್ನು ಬಿಂಬಿಸುವ ಹಟಕ್ಕೆ ಬಿದ್ದ
ಸೋವಿಯತ್ ಒಕ್ಕೂಟ, ಅಕ್ಟೋಬರ್ 4,
1957ರಲ್ಲಿ ಸ್ಪುಟ್ನಿಕ್ 1 ಉಪಗ್ರಹವನ್ನು ವ್ಯೋಮಕ್ಕೆ ಉಡಾಯಿಸಿತು.
ಸೋವಿಯತ್ ಒಕ್ಕೂಟವು ಮೊತ್ತ ಮೊದಲ ಮಾನವ ನಿರ್ಮಿತ ಉಪಗ್ರಹ `ಸ್ಪುಟ್ನಿಕ್ 1'ನ್ನು ಕಕ್ಷೆಗೆ ಹಾರಿಸುವುದರೊಂದಿಗೆ, ಜಗತ್ತಿನಲ್ಲಿ ಬಾಹ್ಯಾಕಾಶ ಯುಗ ಆರಂಭವಾಯ್ತು. ಸ್ಪುಟ್ನಿಕ್ ಸ್ಯಾಟಲೈಟ್, 22 ಇಂಚಿನಷ್ಟು ಅಗಲವನ್ನು ಹಾಗೂ 184 ಪೌಂಡ್ ತೂಕವನ್ನು ಹೊಂದಿತ್ತು. ಪ್ರತಿ 96 ನಿಮಿಷಗಳಿಗೆ ಭೂಮಿಗೆ ಒಂದು ಸುತ್ತು ಹಾಕುತ್ತಿದ್ದ ಸ್ಪುಟ್ನಿಕ್ 18 ಸಾವಿರ ಮೈಲಿ ಕಿಲೋಮೀಟರ್ ವೇಗವನ್ನು ಹೊಂದಿತ್ತು. ಮೂರು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಂಚರಿಸಿದ ಸ್ಪುಟ್ನಿಕ್ 1, 1958ರ ಪ್ರಾರಂಭದಲ್ಲಿ ಭೂಮಿಯ ವಾತಾವರಣ ಪ್ರವೇಶಿಸಿ ಉರಿದುಬಿತ್ತು.
1957ರ ವರ್ಷದಲ್ಲಿಯೇ ಉಡಾವಣೆಯಾಗಿದ್ದ ಸ್ಪುಟ್ನಿಕ್ 2 ಉಪಗ್ರಹದಲ್ಲಿ, ಲೈಕಾ ಎಂಬ ನಾಯಿಯನ್ನು ಕಳಿಸಲಾಗಿತ್ತು.. ನಂತರದ ವರ್ಷದಲ್ಲಿ ಅಮೆರಿಕಾ ದೇಶ ತನ್ನ ಮೊದಲ ಉಪಗ್ರಹ 'ಎಕ್ಸ್‌ಪ್ಲೋರರ್-1' ನ್ನು ಬಾಹ್ಯಾಕಾಶಕ್ಕೆ ಉಡಾಯಿಸಿ ವಿಜ್ಞಾನ ಸಾಧನೆಯನ್ನು ಅನಾವರಣಗೊಳಿಸ್ತು. ನಂತರ, ಶುರುವಾಗಿದ್ದೇ ಸ್ಪೇಸ್ ರೇಸ್. ಕೆನಡಾ,ಇಟಲಿ, ಆಷ್ಟ್ರೇಲಿಯಾ, ಫ್ರಾನ್ಸ್, ಜಪಾನ್ ಈ ಮುಂತಾದ ಜಗತ್ತಿನ ಇತರ ರಾಷ್ಟ್ರಗಳೂ ಉಪಗ್ರಹ ಉಡಾವಣೆ ಮಾಡಿದ್ವು.. ಭಾರತವೂ ಕೂಡ 1975ರಲ್ಲಿ, ಮೊದಲ ಕೃತಕ ಉಪಗ್ರಹ 'ಆರ್ಯಭಟ'ವನ್ನು ಉಡಾವಣೆ ಮಾಡ್ತು..
55 ವರ್ಷಗಳ ಹಿಂದೆ ಉಡಾವಣೆಯಾದ, ಸ್ಪುಟ್ನಿಕ್ ಜಗತ್ತಿನಲ್ಲಿ ಸ್ಪೇಸ್ ರೇಸನ್ನೇ ಹುಟ್ಟುಹಾಕಿತ್ತು. ಅಂದಿನಿಂದ ಇಂದಿನ ತನಕ ಜಗತ್ತಿನ ವಿವಿಧ ರಾಷ್ಟ್ರಗಳಿಂದ ಉಡಾವಣೆಯಾದ ಸ್ಯಾಟಲೈಟ್‌ಗಳ ಸಂಖ್ಯೆ ಆರು ಸಾವಿರಕ್ಕೂ ಹೆಚ್ಚು. ವ್ಯೋಮದ ಕುರಿತಾದ ಮಾನವನ ಕುತೂಹಲ ಮುಂದುವರಿಯುತ್ತಲೇ ಇದೆ. ಮಾನವ ನಿರ್ಮಿತ ಉಪಗ್ರಹವೊಂದು ಭೂಮಿಯಿಂದ ವ್ಯೋಮಕ್ಕೆ ಜಿಗಿದ ಈ ದಿನ 'ಬಾಹ್ಯಾಕಾಶ ವಿಜ್ಞಾನದ ಸುವರ್ಣ ದಿನ' ಅಂದ್ರೆ ತಪ್ಪಾಗಲಾರದು.

ಧನ್ಯವಾದಗಳು. ತುಂಬಾ ಸಮಗ್ರವಾಗಿ ವಿವರಿಸಿದ್ದಿರಿ............
ReplyDelete